ಪಾರ್ಲೆ ಜಿ ಕೇಕ್
ರುಚಿಯಾದ ಪಾರ್ಲೆ ಜಿ ಕೇಕ್ ಮಾಡುವ ವಿಧಾನ.

Published On :
ಬೇಕಾಗುವ ಪದಾರ್ಥಗಳು:
- ಪಾರ್ಲೆ ಜಿ ಬಿಸ್ಕೆಟ್: 250 ಗ್ರಾಂ
- ಹಾಲು: 1.5 ಕಪ್
- ಸಕ್ಕರೆ: ಅರ್ಧ ಕಪ್ ಗಿಂತ ಸ್ವಲ್ಪ ಕಡಿಮೆ
- ಬೇಕಿಂಗ್ ಪೌಡರ್: 1 ಟೀಸ್ಪೂನ್
- ವೆನಿಲ್ಲಾ ಎಸೆನ್ಸ್: 1 ಟೀಸ್ಪೂನ್
- ಬೆಣ್ಣೆ: ಸ್ವಲ್ಪ
ಮಾಡುವ ವಿಧಾನ:
- ಬಿಸ್ಕೆಟ್ ಮತ್ತು ಸಕ್ಕರೆಯನ್ನು ಸರಿಯಾಗಿ ಪುಡಿಯಾಗುವವರೆಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
- ಮಿಶ್ರಣವನ್ನು ಒಂದು ಬೌಲ್‌ಗೆ ಸುರಿದುಕೊಂಡು, ಅದಕ್ಕೆ ಹಾಲು, ಬೇಕಿಂಗ್ ಪೌಡರ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬೇಕಿಂಗ್ ಪ್ಯಾನ್ ಮೇಲೆ ಬೆಣ್ಣೆಯನ್ನು ಹಚ್ಚಿ ಮತ್ತು ಮಿಶ್ರಣವನ್ನು ಅದರೊಳಗೆ ಸುರಿಯಿರಿ.
- ಓವನ್ ಅನ್ನು ಮೊದಲೇ 180 ಡಿಗ್ರಿ C ತಾಪಮಾನಕ್ಕೆ ಕಾಯಿಸಿಕೊಳ್ಳಿ. ನಂತರ ಅದನ್ನು ಸುಮಾರು 45 ನಿಮಿಷಗಳ ಕಾಲ ಬೇಕ್ ಮಾಡಿ. ಈಗ ನಿಮ್ಮ ಕೇಕ್ ಬೆಂದಿದೆ.
- ನೀವು ಇದನ್ನು ಪ್ರೆಶರ್ ಕುಕ್ಕರ್‌ನಲ್ಲಿಯೂ ಬೇಯಿಸಬಹುದು. ಸುಮಾರು 10 ನಿಮಿಷಗಳ ಕಾಲ ಸೀಟಿಯಿಲ್ಲದೆ ಮೊದಲೇ ಕಾಯಿಸಿಕೊಂಡು ನಂತರ ಕುಕ್ಕರ್ ನಲ್ಲಿ ಇಟ್ಟು ಅದನ್ನು ಬೇಯಿಸಿ.

ಪಾರ್ಲೆ ಜಿ ಕೇಕ್ ಅನ್ನು ಸ್ವಲ್ಪ ಐಸ್ ಕ್ರೀಂನೊಂದಿಗೆ ಸೇವಿಸಿದರೆ ರುಚಿ ಬಹಳ.
- ಸಾರಾ ಗ್ರೇಸ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


