ರಾಗಿ ಚಕ್ಕುಲಿ
ರುಚಿಕರವಾದ ಹಾಗೂ ಆರೋಗ್ಯಕರವಾದ ರಾಗಿ ಚಕ್ಕುಲಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ರಾಗಿ ಹಿಟ್ಟು- 2 ಲೋಟ
- ನವಣೆ ಹಿಟ್ಟು-1/2 ಲೋಟ
- ಹುರಿಗಡಲೆ ಪುಡಿ-1/2 ಬಟ್ಟಲು
- ಇಂಗು- ಸ್ವಲ್ಪ
- ಖಾರದ ಪುಡಿ- 2 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಜೀರಿಗೆ- 1/2 ಚಮಚ
- ಬಿಳಿ ಎಳ್ಳು- 1 ಚಮಚ
ಮಾಡುವ ವಿಧಾನ...
- ರಾಗಿ ಹಿಟ್ಟು ಹಾಗೂ ನವಣೆಹಿಟ್ಟು ಎರಡನ್ನೂ ಚೆನ್ನಾಗಿ ಬೆರಿಸಿ, ಒಂದು ಬಟ್ಟೆಯಲ್ಲಿ ಗಟ್ಟಿಯಾಗಿ ಗಂಟು ಕಟ್ಟಿಕೊಳ್ಳಿ. ಈ ಗಂಟನ್ನು ಒಂದು ಬಟ್ಟಲಿನಲ್ಲಿ ಇಟ್ಟು 15-20 ನಿಮಿಷಗಳ ಕಾಲ ಕುಕ್ಕರ್'ನ ಹಬೆಯಲ್ಲಿ ಬೇಯಿಸಿಕೊಳ್ಳಿ.
- ಬಿಸಿ ಆರಿದ ಬಳಿಕ ಗಂಟಿನಲ್ಲಿನ ಹಿಟ್ಟಿಗೆ ಉಳಿದ ಪದಾರ್ಥಗಳನ್ನು ಸೇರಿ, ಚೆನ್ನಾಗಿ ನಾದಿಕೊಂಡು ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ಚಕ್ಕುಲಿ ಒರಳಿನಲ್ಲಿ ಈ ಹಿಟ್ಟನ್ನು ಒತ್ತಿ, ಕಾದ ಎಣ್ಣೆಯಲ್ಲಿ ಹದವಾಗಿ ಕರಿದರೆ ಗರಿ ಗರಿಯಾದ, ರುಚಿಕರವಾಗ ಹಾಗೂ ಆರೋಗ್ಯಕವಾಹ ಚಕ್ಕುಲಿ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


