ಹಯಗ್ರೀವಾ
ರುಚಿಕರವಾದ ಹಯಗ್ರೀವಾ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ - 1 ಬಟ್ಟಲು
- ನೀರು- 3 ಬಟ್ಟಲು
- ಬೆಲ್ಲ - 1 ಬಟ್ಟಲು
- ಲವಂಗ- 4
- ತುಪ್ಪ- 2 ಚಮಚ
- ಗೋಡಂಬಿ - 10
- ದ್ರಾಕ್ಷಿ - ಸ್ವಲ್ಪ
- ಏಲಕ್ಕಿ ಪುಡಿ - ಸ್ವಲ್ಪ
- ತೆಂಗಿನ ತುರಿ- ಅರ್ಧ ಬಟ್ಟಲು
ಮಾಡುವ ವಿಧಾನ...
- ಮೊದಲಿಗೆ ಪ್ರೆಶರ್ ಕುಕ್ಕರ್ ನಲ್ಲಿ ಕಡಲೆ ಬೇಳೆಯನ್ನು 3 ಕಪ್ ನೀರಿನೊಂದಿಗೆ 5 ಸೀಟಿಗಳೊಂದಿಗೆ ಬೇಯಿಸಿಕೊಳ್ಳಿ. ನಂತರ ಬೇಳೆಯಿಂದ ನೀರನ್ನು ಬಸಿಯಿರಿ.
- ಬೇಯಿಸಿದ ಕಡ್ಲೆ ಬೇಳೆಯನ್ನು ದೊಡ್ಡ ಕಡಾಯಿಗೆ ಹಾಕಿಕೊಳ್ಳಿ. ಇದಕ್ಕೆ ಬೆಲ್ಲ, ಲವಂಗ ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ.
- ಬೆಲ್ಲ ಕರಗುವ ತನಕ ಮಿಶ್ರಣ ಮಾಡಿ, ಬೆಲ್ಲ ಕರಗಿ ದಪ್ಪವಾಗಲು ಪ್ರಾರಂಭವಾಗುವವರೆಗೆ ಕೈಯಾಡಿಸುತ್ತಲೇ ಇರಿ.
- ಮತ್ತೊಂದೆಡೆ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು 2 ಚಮಚ ತುಪ್ಪ, ಗೋಡಂಬಿ, ಒಣದ್ರಾಕ್ಷಿ ಹಾಕಿ ಕೆಂಪಗೆ ಹುರಿದಿಟ್ಟುಕೊಳ್ಳಿ.
- ಚಿನ್ನದ ಕಂದು ಬಣ್ಣಕ್ಕೆ ಹುರಿದು ಕಡ್ಲೆ ಬೇಳೆ - ಬೆಲ್ಲದ ಮಿಶ್ರಣಕ್ಕೆ ಹಾಕಿರಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ತುಪ್ಪದೊಂದಿನ ದ್ರಾಕ್ಷಿ, ಗೋಡಂಬಿ ಹಾಕಿದ ಬಳಿಕ ಮಿಶ್ರಣವು ರೇಷ್ಮೆಯಂತೆ ನಯವಾಗಿರುತ್ತದೆ.
- ಬಳಿಕ ಏಲಕ್ಕಿ ಪುಡಿ ಮತ್ತು ತೆಂಗಿನಕಾಯಿ ಸೇರಿಸಿ. ಚೆನ್ನಾಗಿ ಬೆರೆಸಿದೆ ರುಚಿಕರವಾಗ ಹಯಗ್ರೀವಾ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


