ಅಡುಗೆ

ಆ್ಯಪಲ್ ಕೀರು

ರುಚಿಕರವಾದ ಆ್ಯಪಲ್ ಕೀರು ಮಾಡುವ ವಿಧಾನ.

ಆ್ಯಪಲ್ ಕೀರು
ಆ್ಯಪಲ್ ಕೀರು
Published On :

ಬೇಕಾಗುವ ಪದಾರ್ಥಗಳು

  • ಆ್ಯಪಲ್ -2
  • ತುಪ್ಪ- ಸ್ವಲ್ಪ
  • ಹಾಲು- 3 ಬಟ್ಟಲು
  • ಕೇಸರಿ- ಸ್ವಲ್ಪ
  • ಮಿಲ್ಕ್ ಮೇಡ್ - ಮುಕ್ಕಾಲು ಬಟ್ಟಲು
  • ಏಲಕ್ಕಿ- ಸ್ವಲ್ಪ
  • ಬಾದಾಮಿ ಚೂರುಗಳು- ಸ್ವಲ್ಪ

ಮಾಡುವ ವಿಧಾನ...

  • ಮೊದಲು ಆ್ಯಪಲ್'ನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ತುರಿದಿಟ್ಟುಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ 2-3 ಚಮಚ ತುಪ್ಪ ಹಾಕಿ ತುರಿದ ಆ್ಯಪಲ್'ನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. 
  • ಪಾತ್ರೆಯೊಂದಕ್ಕೆ ಹಾಲು ಹಾಕಿ ಚೆನ್ನಾಗಿ ಕಾಯಲು ಬಿಡಬೇಕು. ಹಾಲು ಕೆಂಪಗೆ ಕಾದ ಬಳಿಕ ಕೇಸರಿ ಹಾಗೂ ಮಿಲ್ಕ್ ಮೇಡ್ ಹಾಕಬೇಕು. ಮಿಲ್ಕ್ ಮೇಡ್ ಇಲ್ಲದಿದ್ದರೆ, ಅಳತೆಗೆ ತಕ್ಕಷ್ಟು ಸಕ್ಕರೆ ಹಾಕಬಹುದು. 
  • ಬಳಿಕ ಏಲಕ್ಕಿ ಪುಡಿ ಹಾಕಿ ಸ್ವಲ್ಪ ಹೊತ್ತು ಕಾಯಿಸಿ, ಆ್ಯಪಲ್ ಹಾಗೂ ಬಾದಾಮಿ ಚೂರುಗಳನ್ನು ಸೇರಿಸಿ, ಕೆಲ ಗಂಟೆಗಳ ಕಾಲ ಫ್ರಿಡ್ಜ್'ನಲ್ಲಿಟ್ಟು ತೆಗೆದರೆ ರುಚಿಕರವಾದ ಆ್ಯಪಲ್ ಕೀರು ಸವಿಯಲು ಸಿದ್ಧ. 
     

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.