ಮಾವಿನ ಹಣ್ಣಿನ ಗೊಜ್ಜು
ಈಗ ಮಾವಿನ ಹಣ್ಣಿನ ಸಮಯ. ಮಾವಿನ ಹಣ್ಣಿನಲ್ಲಿ ಹಲವು ರುಚಿಕರ ತಿನಿಸುಗಳನ್ನು ಮಾಡಬಹುದಾಗಿದ್ದು ಅವುಗಳಲ್ಲಿ ...

Published On :
ಈಗ ಮಾವಿನ ಹಣ್ಣಿನ ಸಮಯ. ಮಾವಿನ ಹಣ್ಣಿನಲ್ಲಿ ಹಲವು ರುಚಿಕರ ತಿನಿಸುಗಳನ್ನು ಮಾಡಬಹುದಾಗಿದ್ದು ಅವುಗಳಲ್ಲಿ ಒಂದು ಮಾವಿನ ಹಣ್ಣಿನ ಗೊಜ್ಜು. ಇದಕ್ಕೆ ಮಲೆನಾಡು, ಕರಾವಳಿ ಭಾಗಗಳಲ್ಲಿ ಸಿಗುವ ಚಿಕ್ಕ ಕಾಟು ಮಾವಿನ ಹಣ್ಣು ಆದರೆ ಉತ್ತಮ. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಜಾತಿಯ ಮಾವಿನ ಹಣ್ಣುಗಳಿಂದಲೂ ಮಾಡಬಹುದು.
ಬೇಕಾಗುವ ಪದಾರ್ಥಗಳು
ಒಗ್ಗರಣೆಗೆ-ಕಡಲೇ ಬೇಳೆ - 1 ಟೀ ಚಮಚ
ಉದ್ದಿನ ಬೇಳೆ - 1 ಟೀ ಚಮಚ
ಕೊತ್ತಂಬರಿ ಬೀಜ - 1 ಟೀ ಚಮಚ
ಮೆಂತ್ಯ - 1/4 ಟೀ ಚಮಚ
ಸಾಸಿವೆ - 1/4 ಟೀ ಚಮಚ
ಜೀರಿಗೆ - 1/4 ಟೀ ಚಮಚ
ಬ್ಯಾಡಗಿ ಮೆಣಸಿನಕಾಯಿ - 5ರಿಂದ 7
ಮಾಡುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹಣ್ಣು ವಾಟೆ ಸಮೇತ ಹಾಗೇ ಇಡಿ. ಸಿಪ್ಪೆಗೆ ಸ್ವಲ್ಪ ನೀರು ಹಾಕಿ ಕಿವುಚಿ ರಸ ತೆಗೆದು ಹಣ್ಣಿಗೆ ಹಾಕಿಡಿ. ಊಟ ಮಾಡುವಾಗ ಹಣ್ಣಿನ ರಸವನ್ನು ಚೆನ್ನಾಗಿ ಚೀಪಿ ವಾಟೆ ಎಸೆಯಬೇಕು. ಕಾಯಿ ತುರಿ ಬಿಟ್ಟು ಉಳಿದ ಸಾಮಗ್ರಿಗಳನ್ನು ಹುರಿದು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು, ಸ್ವಲ್ಪ ಇಂಗು ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ, ಮಾವಿನ ಹಣ್ಣಿನ ಮಿಶ್ರಣ, ಒಂದು ಚಮಚ ಹುಣಿಸೆ ಹಣ್ಣಿನ ರಸ, ಚೂರು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನ ಗೊಜ್ಜು ಸಿದ್ಧ.
ಇದನ್ನು ಚಪಾತಿ, ಪೂರಿ, ರೊಟ್ಟಿ ಜೊತೆ ಸೇರಿಸಿಕೊಳ್ಳಬಹುದು. ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ರುಚಿಯಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


