ಕಡಲೆಕಾಯಿ ಬೀಜ ಮಸಾಲೆ ಚಾಟ್
ರುಚಿಕರವಾದ ಕಡಲೆಕಾಯಿ ಬೀಜದ ಮಸಾಲೆ ಚಾಟ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಕಡಲೆಕಾಯಿ ಬೀಜ- 1 ಬಟ್ಟಲು
- ಎಣ್ಣೆ- 2 ಚಮಚ
- ಕರಿಬೇವು ಎಲೆ - ಸ್ವಲ್ಪ
- ಅರಿಶಿನ ಪುಡಿ - ಅರ್ಧ ಚಮಚ
- ಅಚ್ಚ ಖಾರದ ಪುಡಿ - ಮುಕ್ಕಾಲು ಚಮಚ
- ಇಂಗು- ಸ್ವಲ್ಪ
- ಕಾಳು ಮೆಣಸು- ತರಿತರಿಯಾಗಿ ಕುಟ್ಟಿಕೊಂಡಿದ್ದು 3-4 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 1-2 ಚಮಚ
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1-2 ಚಮಚ
- ಕ್ಯಾರೆಟ್ ತುರಿ- 1-2 ಚಮಚ
- ಕೊತ್ತಂಬರಿ ಸೊಪ್ಪು- - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ನಿಂಬೆಹಣ್ಣಿನ ರಸ- 1 ಚಮಚ
ಮಾಡುವ ವಿಧಾನ...
- ಕಡಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದುಕೊಂಡು, ಸಂಪೂರ್ಣವಾಗಿ ತಣ್ಣಗಾದ ಬಳಿಕ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಬೇಕು.
- ನಂತರ ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಕೆಂಪಗೆ ಹುರಿದುಕೊಂಡು, ಇದಕ್ಕೆ ಹುರಿದಿಟ್ಟುಕೊಂಡ ಕಡಲೆಕಾಯಿ ಬೀಜ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಈರುಳ್ಳಿ, ಟೊಮೆಟೋ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಮಸಾಲೆ ಕಡಲೆಕಾಯಿ ಬೀಜದ ಚಾಟ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


