ಅಡುಗೆ

ರವೆ ಬಾಲ್

ರುಚಿಕರವಾದ ರವೆ ಬಾಲ್ಸ್ ಮಾಡುವ ವಿಧಾನ...

ರವೆ ಬಾಲ್
ರವೆ ಬಾಲ್
Published On :
ಬೇಕಾಗುವ ಪದಾರ್ಥಗಳು
  • ಹಸಿಮೆಣಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು 2-3
  • ಶುಂಠಿ - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ತೆಂಗಿನಕಾಯಿ ತುರಿ - 1 ಬಟ್ಟಲು
  • ಉಪ್ಪು - ರುಚಿಗೆ ತಕ್ಕಷ್ಟು
  • ಸಣ್ಣ ರವೆ - 1 ಬಟ್ಟಲು
  • ಎಣ್ಣೆ -5-6 ಚಮಚ
  • ನೀರು- 2.5 ಬಟ್ಟಲು
  • ಸಾಸಿವೆ- ಸ್ವಲ್ಪ
  • ಕರಿಬೇವು - ಸ್ವಲ್ಪ
  • ಕಡಲೆಬೇಳೆ- ಸ್ವಲ್ಪ
  • ಉದ್ದಿನಬೇಳೆ- ಸ್ವಲ್ಪ
  • ಅರಿಶಿನ ಪುಡಿ- ಸ್ವಲ್ಪ
  • ಅಚ್ಚ ಖಾರದ ಪುಡಿ- ಸ್ವಲ್ಪ
  • ಜೀರಿಗೆ- ಸ್ವಲ್ಪ
  • ಗೋಡಂಬಿ- ಸ್ವಲ್ಪ
  • ಒಣಗಿದ ಮೆಣಸಿನ ಕಾಯಿ- 2-3
ಮಾಡುವ ವಿಧಾನ...
  • ಮೊದಲಿಗೆ ರವೆಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಪಾತ್ರೆಯೊಂದಕ್ಕೆ 1 ಚಮಚ ಎಣ್ಣೆ ಹಾಕಿ. ಕಾದ ನಂತರ ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಶುಂಠಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಕೊಬ್ಬರಿ ತುರಿ 2.5 ಬಟ್ಟಲು ನೀರು, ಉಪ್ಪು ಹಾಕಿ ಕುದಿಯಲು ಬಿಡಬೇಕು. ನೀರು ಕುದಿಯುತ್ತಿರುವ ವೇಳೆ ರವೆಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ, 2-3 ನಿಮಿಷ ಒಲೆಯ ಮೇಲೆ ಹಾಗೆಯೇ ಬಿಡಿ.
  • ಸಂಪೂರ್ಣವಾಗಿ ತಣ್ಣಗಾದ ಬಳಿಕ ಚೆನ್ನಾಗಿ ಹಿಟ್ಟಿನಂತೆ ನಾದಿಕೊಳ್ಳಬೇಕು. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಪಾತ್ರೆಯೊಂದಕ್ಕೆ ನೀರು ಹಾಕಿ ಅದರ ಮೇಲೆ ತಣ್ಣೆ ಅಥವಾ ಬಟ್ಟಲನ್ನು ಇಟ್ಟು ಈ ಉಂಡೆಗಳನ್ನು ಇಟ್ಟು ಹಬೆಯಲ್ಲಿ 10 ನಿಮಿಷ ಬೇಯಿಸಿಕೊಳ್ಳಬೇಕು. 
  • ನಂತರ ಬಾಣೆಲೆಗೆ 3 ಚಮಚ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಕರಿಬೇವು, ಒಣಗಿದ ಮೆಣಸಿನ ಕಾಯಿ, ಗೋಡಂಬಿ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಉಪ್ಪು, ಅಚ್ಚ ಖಾರದ ಪುಡಿ, ಉಪ್ಪು, ಹಾಕಿ ಚೆನ್ನಾಗಿ ಹುರಿದುಕೊಂಡು ಬಳಿಕ ಹಬೆಯಲ್ಲಿ ಬೇಯಿಸಿಕೊಂಡ ಉಂಡೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ರವೆ ಬಾಲ್ಸ್ ಸವಿಯಲು ಸಿದ್ಧ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.