ಅಡುಗೆ

ಮಟನ್ ಘೀ ರೋಸ್ಟ್

ರುಚಿಕರವಾದ ಮಟನ್ ಘೀ ರೋಸ್ಟ್ ಮಾಡುವ ವಿಧಾನ...

ಮಟನ್ ಘೀ ರೋಸ್ಟ್
ಮಟನ್ ಘೀ ರೋಸ್ಟ್
Published On :
ಬೇಕಾಗುವ ಪದಾರ್ಥಗಳು
  • ತುಪ್ಪ-3 ಚಮಚ
  • ಶುಂಠಿ, ಬೆಳ್ಳುಳ್ಳು ಪೇಸ್ಟ್- 1 ಚಮಚ
  • ಅರಿಶಿನ- ಅರ್ಧ ಚಮಚ
  • ಕುರಿ ಮಾಂಸ- 1 ಕೆಜಿ
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾಶ್ಮೀರಿ ಮೆಣಸಿನ ಕಾಯಿ - 10 
  • ದನಿಯಾ- 1 ಚಮಚ
  • ಕಾಳು ಮೆಣಸು- 1 ಚಮಚ
  • ಸೋಂಪು- 1 ಚಮಚ
  • ಜೀರಿಗೆ- 2 ಚಮಚ
  • ಚಕ್ಕೆ- 1 
  • ಲವಂಗ- 4
  • ಮರಾಠಿ ಮೊಗ್ಗು- 1 
  • ಒಣಗಿದ ಮೆಣಸಿನ ಕಾಯಿ- 6 
  • ಶುಂಠಿ - ಸ್ವಲ್ಪ
  • ಬೆಳ್ಳುಳ್ಳು - 2 ಎಸಳು
  • ನಿಂಬೆಹಣ್ಣಿನ ರಸ- 1 ಚಮಚ
  • ಮೊಸರು- 1 ಚಮಚ
ಮಾಡುವ ವಿಧಾನ...
  • ಮೊದಲು ಕುಕ್ಕರ್'ಗೆ ತುಪ್ಪ ಕಾಯಿಸಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಹಾಕಿ ಹುರಿದುಕೊಳ್ಳಬೇಕು. 
  • ನಂತರ ತೊಳೆದ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ, ಬೇಯಲು ನೀರು ಹಾಕಿ ಕುಕ್ಕರ್ ಮುಚ್ಚಿ 4-5 ಕೂಗು ಕೂಗಿಸಿಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ, ಕಾಶ್ಮೀರಿ ಮೆಣಸಿನ ಕಾಯಿಯನ್ನು ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. 
  • ಇದೇ ಬಾಣಲೆಗೆ, ದನಿಯಾ, ಕಾಳು ಮೆಣಸು, ಸೋಂಪು, ಜೀರಿಗೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ಒಣಗಿದ ಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಮಿಕ್ಸಿ ಜಾರ್'ಗೆ ಹುರಿದಿಟ್ಟುಕೊಂಡಿದ್ದೆಲ್ಲವನ್ನೂ ಹಾಕಿ, ಶುಂಠಿ, ಬೆಳ್ಳುಳ್ಳು, ನಿಂಬೆರಸ ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. 
  • ಕುಕ್ಕರ್ ಮುಚ್ಚಳ ತೆಗೆದು ಬೆಂದ ಮಾಂಸದಿಂದ ನೀರನ್ನು ಬಸಿದು ತೆಗೆದಿಟ್ಟುಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ತುಪ್ಪ, ರುಬ್ಬಿಕೊಂಡ ಮಿಶ್ರಣ, ಮೊಸರು, ಬೆಂದ ಮಾಂಸದಿಂದ ತೆಗೆದ ನೀರು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಮಸಾಲೆ ಗಟ್ಟಿಯಾಗುತ್ತಿದ್ದಂತೆಯೇ ಬಂದ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 2-3 ನಿಮಿಷ ಬೇಯಲು ಬಿಡಬೇಕು. ನಂತರ ಕರಿಬೇವಿನ ಎಲೆಗಳನ್ನು ಹಾಕಿ ಅಲಂಕರಿಸಿದರೆ, ರುಚಿಕರವಾದ ಮಟರ್ ಘೀ ರೋಸ್ಟ್ ಸವಿಯಲು ಸಿದ್ಧ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.