ಬಟರ್ ನಾನ್
ರುಚಿಕರವಾದ ಬಟರ್ ನಾನ್ ಮಾಡುವ ವಿಧಾನ....

Published On :
ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು - 1 ಬಟ್ಟಲು
- ಸಕ್ಕರೆ - ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಬೆಣ್ಣೆ- ಅರ್ಧ ಬಟ್ಟಲು
- ಎಣ್ಣೆ - 1 ಚಮಚ
- ಮೊಸರು - ಅರ್ಧ ಬಟ್ಟಲು
- ಅಡುಗೆ ಸೋಡಾ - ಅರ್ಧ ಚಮಚ
- ಬೇಕಿಂಗ್ ಪೌಡರ್ - ಅರ್ಧ ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ...
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಸಕ್ಕರೆ, ಅಡುಗೆ ಸೋಡಾ, ಉಪ್ಪು, ಬೇಕಿಂಗ್ ಪೌಡರ್, ಮೊಸರು, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ನೀರು ಹಾಕಿ ಹಿಟ್ಟನ್ನು ತಯಾರಿಸಿ, 10-15 ನಿಮಿಷ ನೆನೆಯಲು ಬಿಡಬೇಕು.
- ಬೆಣ್ಣೆಯನ್ನು ಕಾಯಿಸಿ ಅದನ್ನು ಬಟ್ಟಲಿಗೆ ಹಾಕಿಕೊಂಡು, ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಹಿಟ್ಟನ್ನು ಸಣ್ಣಗೆ ಉಂಡೆಗಳನ್ನಾ ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ಒಂದು ಬದಿಯಲ್ಲಿ ನೀರಿನಲ್ಲಿ ಸವರಿಟ್ಟುಕೊಳ್ಳಬೇಕು.
- ತವಾವನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ ಸ್ವಲ್ಪ ಬೆಣ್ಣೆ ಹಾಕಿ ಲಟ್ಟಿಸಿಕೊಂಟ ಹಿಟ್ಟನ್ನು ಹಾಕಿ ಒಂದು ಬದಿಯಲ್ಲಿ ಸುಡಬೇಕು. ಮತ್ತೊಂದು ಬದಿಗೆ ಬೆಣ್ಣೆಯನ್ನು ಹಾಕಿ ಸವರಿ, ಎರಡೂ ಬದಿಯಲ್ಲೂ ಕಂಪಗೆ ಸುಟ್ಟರೆ ರುಚಿಕರವಾದ ಬಟಲ್ ನಾನ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


