ಬದನೆಕಾಯಿ ರವೆ ಫ್ರೈ
ರುಚಿಕರವಾದ ಬದನೆಕಾಯಿ ರವೆ ಫ್ರೈ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಗುಂಡು ಬದನೆಕಾಯಿ - 3-4
- ಅಚ್ಚ ಖಾರದ ಪುಡಿ - 2 ಚಮಚ
- ಅರಿಶಿನ
- ಇಂಗು
- ಅಕ್ಕಿ ಹಿಟ್ಟು
- ಉಪ್ಪು
- ಸಣ್ಣ ರವೆ
- ಎಣ್ಣೆ - ಕರಿಯಲು
ಮಾಡುವ ವಿಧಾನ...
- ಮೊದಲು ಬದನೆಕಾಯಿ ಚೆನ್ನಾಗಿ ತೊಳೆದು ಜುಟ್ಟನ್ನು ತೆಗೆದು ಮಧ್ಯಮ ಗಾತ್ರಕ್ಕೆ ಬದನೆಯಾಯನ್ನು ಕತ್ತರಿಸಿಕೊಳ್ಳಬೇಕು.
- ಬಳಿಕ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು, ಚಿಟಿಕೆ ಇಂಗು, ಅಕ್ಟಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು.
- ಈ ಮುಶ್ರಣಕ್ಕೆ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಬದನೆಕಾಯಿಯನ್ನು ಹಾಕಿ ಮಸಾಲೆ ಬದನೆಕಾಯಿಗೆ ಅಂಟುವಂತೆ ಮಾಡಿಟ್ಟುಕೊಳ್ಳಬೇಕು.
- ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸಣ್ಣ ರವೆ, ಉಪ್ಪು, ಖಾರದ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಬಳಿಕ ಮಸಾಲೆ ಹಚ್ಚಿದ ಬದನೆಕಾಯಿಗಳನ್ನು ತೆಗೆದುಕೊಂಡು ರವೆಯೊಂದಿಗೆ ಹೊರಳಿಸಬೇಕು.
- ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬದನೆಕಾಯಿಗಳನ್ನು ಹಾಕಿ ಚೆನ್ನೈಗಿ ಎರಡೂ ಕಡೆ ಫ್ರೈ ಮಾಡಿದರೆ ರುಚಿಕರವಾದ ಬದನೆಕಾಯಿ ಫ್ರೈ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


