ಅಡುಗೆ

ಮಲೈ ಕೊಫ್ತಾ

ಮಲೈ ಕೊಫ್ತಾ ಮಾಡುವ ವಿಧಾನ...

ಮಲೈ ಕೊಫ್ತಾ
ಮಲೈ ಕೊಫ್ತಾ
Published On :
ಬೇಕಾಗುವ ಪದಾರ್ಥಗಳು
  • ಈರುಳ್ಳಿ - 2
  • ಗಸಗಸೆ - 1 ಚಮಚ
  • ದ್ರಾಕ್ಷಿ, ಗೋಡಂಬಿ - 10-12
  • ಬೆಣ್ಣೆ - 3 ಚಮಚ
  • ಖಾರದ ಪುಡಿ - ಒಂದೂವರೆ ಚಮಚ
  • ಬೆಳ್ಳುಳ್ಳಿ - 7-8 ಎಸಳು
  • ಹಸಿಮೆಣಸಿನ ಕಾಯಿ - 2-3
  • ಗರಂ ಮಸಾಲಾ - ಒಂದೂವರೆ ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಪನ್ನೀರ್ - 50 ಗ್ರಾಂ
  • ಬ್ರೆಡ್ - 2-3 
  • ಕ್ರೀಂ - 5-6 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಕರಿಯಲು
ಮಾಡುವ ವಿಧಾನ...
  • ಮೊದಲು ತಟ್ಟೆಯೊಂದನ್ನು ತೆಗೆದುಕೊಂಡು ಪನ್ನೀರ್ ನ್ನು ತುರಿದುಕೊಳ್ಳಬೇಕು. ಬ್ರೆಡ್ ಗಳನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿಕೊಂಡು ತೆಗೆದು, ಪನ್ನೀರ್ ಜೊತೆ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಸ್ಲಲ್ಪ, ಉಪ್ಪು ಹಾಕಿ ಮಿಶ್ರಣ ಮಾಡಬೇಕು. 
  • ಚಿತ್ತ ಬಟ್ಟಲು ತೆಗೆದುಕೊಂಡು ಅದಕ್ಕೆ ದ್ರಾಕ್ಷಿ, ಗೋಡಂಬಿ, 1 ಚಮಚ ಕ್ರೀಂ, ಹಸಿಮೆಣಸಿನ ಕಾಯಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. 
  • ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಮಿಶ್ರಣ ಮಾಡಿಕೊಂಡ ಪನ್ನೀರ್ ನ್ನು ವಡೆ ಆಖಾರದಲ್ಲಿ ತಟ್ಟಿ ಮಧ್ಯೆ ದ್ರಾಕ್ಷಿ, ಗೋಡಂಬಿ ಮಿಶ್ರಣ ಇಟ್ಟು ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದುಕೊಳ್ಳಬೇಕು. 
  • ಮತ್ತೊಂದೆಡೆ ಪಾತ್ರೆಗೆ 1 ಲೋಟ ನೀರು ಹಾಕಿ ಹೆಚ್ಚಿಕೊಂಡ ಈರುಳ್ಳಿ ಹಾಕಿ 3-4 ನಿಮಿಷ ಬೇಯಿಸಿಕೊಂಡು, ಅದು ತಣ್ಣಗಾದ ಬಳಿಕ ಪೇಸ್ಟ್ ಮಾಡಿಕೊಳ್ಳಬೇಕು. 
  • ಜಾರ್ ತೆಗೆದುಕೊಂಡು ನೀರಿನಲ್ಲಿ ನೆನೆಸಿಕೊಂಡ ಗಸಗಸೆ, ನೀರಿನಲ್ಲಿ ನೆನೆಸಿದ ಗೋಡಂಬಿ, ಬೆಳ್ಳುಳ್ಳಿ ಎಸಳು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. 
  • ಬಾಣಲೆಗೆ ಬೆಣ್ಣೆ ಹಾಕಿ ನಂತರ ಈರುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಮಾಡಿಕೊಳ್ಳಬೇಕು. ನಂತರ ಗೋಡಂಬಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಉಪ್ಪು, ಖಾರದ ಪುಡಿ ಹಾಕಿ ಮಿಶ್ರಣ ಮಾಡಬೇಕು. ನಂತರ ಅರ್ಧ ಬಟ್ಟಲು ನೀರು, ಉಳಿದ ಕ್ರಾಂ, ಗರಂ ಮಸಾಲಾ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಬೇಕು. ನಂತರ ಈ ಹಿಂದೆಯೇ ಮಾಡಿಕೊಂಡ ಕೊಫ್ತಾಗಳನ್ನು ಹಾಕಿ 5 ನಿಮಿಷ ಕುದಿಸಿದರೆ ರುಚಿಕರವಾದ ಮಲೈ ಕೋಫ್ತಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.