ಪನ್ನೀರ್ ನವಣೆ ಫ್ರೈಡ್ ರೈಸ್
ಪನ್ನೀರ್ ನವಣೆ ಫ್ರೈಡ್ ರೈಸ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ನವಣೆಯಲ್ಲಿ ಮಾಡಿದ ಅಕ್ಕಿ - 1 ಬಟ್ಟಲು
- ಕತ್ತರಿಸಿಕೊಂಡ ಈರುಳ್ಳಿ - 1 ಬಟ್ಟಲು
- ಬಟಾಣಿ - 1/4 ಬಟ್ಟಲು
- ಕತ್ತರಿಸಿಕೊಂಡ ಗೋಡಂಬಿ - 10
- ಸಣ್ಣದಾಗಿ ಹೆಚ್ಚಿಕೊಂಡ ಪನ್ನೀರ್ - 1/4 ಬಟ್ಟಲು
- ಜೀರಿಗೆ - 1 ಚಮಚ
- ಪಲಾವ್'ಗೆ ಹಾಕುವ ಎಲೆ - 2-3
- ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 3-4
ಮಾಡುವ ವಿಧಾನ...
- 1 ಕಪ್ ನವಣೆ ಅಕ್ಕಿಗೆ 2 ಬಟ್ಟಲು ನೀರು ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಪ್ರೆಷರ್ ಕುಕ್ಕರೆ ಹಾಕಿ ಅನ್ನ ಮಾಡಿಕೊಳ್ಳಬೇಕು. ನಂತರ ಅನ್ನ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
- ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಇದಕ್ಕೆ ಸ್ವಲ್ಪ ನೀರು ಹಾಕಿ ಬಟಾಣಿಯನ್ನು 5-10 ನಿಮಿಷಗಳ ಕಾಲ ಬೇಯಿಸಿಕೊಂಡು, ನೀರು ಬಸಿದು ಬೆಂದ ಬಟಾಣೆಯನ್ನು ಪಾತ್ರೆಯೊಂದಕ್ಕೆ ಹಾಕಿಕೊಳ್ಳಬೇಕು.
- ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಪನ್ನೀರ್'ನ್ನು ಕೆಂಪಗೆ ಹುರಿದುಕೊಳ್ಳಬೇಕು.
- ಪ್ಯಾನ್ ವೊಂದನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಎಣ್ಣೆ ಹಾಕಿ, ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಜೀರಿಗೆ, ಈರುಳ್ಳಿ, ಹಸಿಮೆಣಸಿನ ಕಾಯಿ, ಗೋಡಂಬಿ ಮತ್ತು ಪಲಾವ್ ಎಲೆಗಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಪನ್ನೀರ್ ಹಾಗೂ ಬೆಂದ ಬಟಾಣೆ, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈಗಾಗಲೇ ಮಾಡಿಕೊಂಡ ನವಣೆ ಅನ್ನವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾಗ ಹಾಗೂ ಆರೋಗ್ಯಕವಾದ ಪನ್ನೀರ್ ನವಣೆ ಫ್ರೈಡ್ ರೈಸ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


