ನವಣೆ ರೊಟ್ಟಿ
ನವಣೆ ರೊಟ್ಟಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ನವಣೆಯಲ್ಲಿ ಮಾಡಿದ ಹಿಟ್ಟು - 2 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಬಿಸಿ ನೀರು - 1.5 ಬಟ್ಟಲು
- ಬಟರ್ ಪೇಪರ್ - 2
- ಎಣ್ಣೆ/ತುಪ್ಪ - ಸ್ವಲ್ಪ
ಮಾಡುವ ವಿಧಾನ...
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನವಣೆಯಲ್ಲಿ ಮಾಡಿಕೊಂಡ ಹಿಟ್ಟನ್ನು ಹಾಕಬೇಕು. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಬಿಸಿ ನೀರನ್ನು ಹಾಕಿಕೊಂಡು ಸ್ವಲ್ಪ-ಸ್ವಲ್ಪವಾಗಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿನಂತೆ ಸ್ವಲ್ಪ ಮೃದುವಾಗಿ ಬಂದ ನಂತರ ಕವರ್ ವೊಂದಕ್ಕೆ ಹಾಕಿ 15-20 ನಿಮಿಷ ನೆನೆಯಲು ಬಿಡಬೇಕು.
- ನಂತರ ಬಟರ್ ಪೇಪರ್ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ಹಿಟ್ಟನ್ನು ಬಾಲಿನಂತೆ ಉಂಡೆ ಮಾಡಿಕೊಂಡು ಅದರ ಮೇಲಿಡಬೇಕು. ಮತ್ತೊಂದು ಬಟರ್ ಪೇಪರ್ ತೆಗೆದುಕೊಂಡು ಅದಕ್ಕೆ ತುಪ್ಪ ಸವರಿ ಉಂಡೆಯ ಮೇಲಿಟ್ಟು ಚಪಾತಿಯಂತೆ ತಟ್ಟಬೇಕು.
- ಒಲೆಯ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ, ರುಚಿಕರವಾದ ನವಣೆ ರೊಟ್ಟಿ ತಿನ್ನಲು ಸಿದ್ಧವಾಗುತ್ತದೆ. ಕಡಲೆಬೀಜ ಚಟ್ನಿಯೊಂದಿಗೆ ತರಕಾರಿ ಪಲ್ಯ ಹಾಕಿ ತಿಂದರೆ ನವಣೆ ರೊಟ್ಟಿಯ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


