ಕ್ರಿಸ್ಪಿ ಚಿಕನ್ ಪಕೋಡಾ
ಕ್ರಿಸ್ಪಿ ಚಿಕನ್ ಪಕೋಡಾ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಬೋನ್ ಲೆಸ್ ಚಿಕನ್ - ಅರ್ಧ ಕೆಜಿ
- ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು) - 5 ಚಮಚ
- ಮೈದಾ ಹಿಟ್ಟು - 5 ಚಮಚ
- ಮೊಟ್ಟೆ - 2
- ಸೋಯಾ ಸಾಸ್ - 2 ಚಮಚ
- ಚಿಲ್ಲಿ ಸಾಸ್ - 2 ಚಮಚ
- ಸಾಸಿವೆ ಪುಡಿ - 1 ಚಮಚ
- ಕಾಳು ಮೆಣಸಿನ ಪುಡಿ - ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಬ
- ಉಪ್ಪು- ರುಚಿಗೆ ತಕ್ಕಷ್ಟು
- ಅಜಿನೋಮೋಟೋ - ಚಿಟಿಕೆಯಷ್ಟು
- ಎಣ್ಣೆ - ಕರಿಯಲು
ಮಾಡುವ ವಿಧಾನ...
- ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು ಪಾತ್ರೆಯೊಂದಕ್ಕೆ ಹಾಕಿಡಬೇಕು.
- ಪ್ರೆಷರ್ ಕುಕ್ಕರ್ ತೆಗೆದುಕೊಂದು ಅದಕ್ಕೆ ಸ್ವಲ್ಫ ಮಾಂಸವನ್ನು ಹಾಗಿ ಮಧ್ಯಮಗಾತ್ರದ ಲೋಟದಲ್ಲಿ 2-3 ಲೋಟ ನೀರು, ಎಣ್ಣೆ, ಅಜಿನೋಮೋಟೋ, ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ 4 ಕೂಗು ಕೂಗಿಸಿಕೊಳ್ಳಬೇಕು.
- ನಂತರ ಬೆಂದ ಮಾಂಸವನ್ನು ತೆಗೆದು ನೀರು ಹೋಗುವಂತೆ ಮಾಡಬೇಕು. ಪಾತ್ರೆಯೊಂದರನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಕಾರ್ನ್ ಫ್ಲೋರ್, ಮೊಟ್ಟೆ, ಸೋಯಾಸಾಸ್, ಚಿಲ್ಲಿ ಸಾಸ್, ಸಾಸಿವೆಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟು ಸ್ವಲ್ಪ ಗಟ್ಟಿಯಿರುವಂತೆಯೇ ಮಾಡಿಕೊಳ್ಭಬೇಕು. ಅಗತ್ಯಬಿದ್ದರೆ, ಹಾಲು ಸೇರಿಸಬಹುದು.
- ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಕಾಯಲು ಬಿಡಬೇಕು. ಎಣ್ಣೆ ಕಾದ ನಂತರ ಬೇಯಿಸಿದ ಮಾಂಸದ ಚೂರುಗಳನ್ನು ಮಿಶ್ರಣದಲ್ಲಿ ಅದ್ದಿಕೊಂಡು ಎಣ್ಣೆಗೆ ಹಾಕಿ ಕೆಂಪಗೆ ಕರಿದುಕೊಂಡರೆ ರುಚಿಕರವಾದ ಕ್ರಿಸ್ಪಿ ಚಿಕನ್ ಪಕೋಡಾ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


