ಸೋರೆಕಾಯಿ ಬರ್ಫಿ
ಸೋರೆಕಾಯಿ ಬರ್ಫಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ತುರಿದ ಸೋರೆಕಾಯಿ - 2 ಬಟ್ಟಲು
- ತುಪ್ಪ - 1 ಬಟ್ಟಲು
- ಹಾಲು - 1 ಬಟ್ಟಲು
- ಕೋವಾ - 1 1/2 ಬಟ್ಟಲು
- ಏಲಕ್ಕಿ ಪುಡಿ - 1 ಚಮಚ
- ಲವಂಗ - 2
- ಸಕ್ಕರೆ - 2 ಬಟ್ಟಲು
- ಡ್ರೈಫ್ರೂಟ್ಸ್ - (ದ್ರಾಕ್ಷಿ, ಬಾಗಾಮಿ, ಗೋಡಂಬಿ, ಗೇರು ಬೀಜ, ಅಕ್ರೂಟ್, ನೆಲಗಡಲೆ) ಅರ್ಧ ಬಟ್ಟಲು
- ತುರಿದ ತೆಂಗಿನ ಕಾಯಿ - ಅರ್ಧ ಬಟ್ಟಲು
- ಸೂರ್ಯಕಾಂತಿ ಬೀಜ - 1 ಚಮಚ
- ಮೆಲನ್ ಬೀಜ - 1 ಚಮಚ
ಮಾಡುವ ವಿಧಾನ...
- ಮೊದಲು ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು.
- ನೆಲಗಡಲೆಯನ್ನು ಸಿಪ್ಪೆ ತೆಗೆದು ಬೀಜವನ್ನು ಬಿಡಿಸಿಕೊಳ್ಳಿ.
- ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಇದಕ್ಕೆ ಏಲಕ್ಕಿ ಪುಡಿ ಹಾಗೂ ಲವಂಗವನ್ನು ಹಾಕಬೇಕು. ನಂತರ ತುರಿದ ಸೋರೆಕಾಯಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
- ಸೋರೆಕಾಯಿಯಿಂದ ತುಪ್ಪ ಬೇರ್ಪಡುವವರೆಗೆ ಕೈಯಾಡಿಸುತ್ತಿರಬೇಕು.
- ನಂತರ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಮತ್ತೊಂದು ಒಲೆಯ ಮೇಲೆ ಹಾಲನ್ನು ಕಾಯಿಸಿ ಅದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಬೇಕು. ಇದನ್ನು ಬೇಯಿಸಿಕೊಂಡ ಸೋರೆಕಾಯಿಗೆ ಹಾಕಿ ಮಿಶ್ರಣವನ್ನು ಮಾಡಬೇಕು.
- ಸೋರೆಕಾಯಿ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ, ಕೋವಾ ಹಾಗೂ ಕತ್ತರಿಸಿಕೊಂಡ ನಟ್ಸ್ ಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
- ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ. ಮುಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಉಳಿದ ನಟ್ಸ್ ಗಳನ್ನು ಇದರ ಮೇಲೆ ಹಾಕಿ ಅಲಂಕಾರ ಮಾಡಿ. ಕೆಲಸ ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿರಿಸಿ ತಿಂದರೆ ರುಚಿಕರವಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


