ಗಸಗಸೆ ಅಕ್ಕಿ ಪಾಯಸ
ಗಸಗಸೆ ಅಕ್ಕಿ ಪಾಯಸ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಗಸಗಸೆ - ಒಂದು ಸಣ್ಣ ಬಟ್ಟಲು
- ಅಕ್ಕಿ - ಒಂದು ಬಟ್ಟಲು
- ತುಪ್ಪ- ಸ್ವಲ್ಪ
- ದ್ರಾಕ್ಷಿ, ಗೋಡಂಬಿ - ಸ್ವಲ್ಪ
- ಹಾಲು - ಎರಡು ಬಟ್ಟಲು
- ಸಕ್ಕರೆ - 1 ಬಟ್ಟಲು
- ಏಲಕ್ಕಿ ಪುಡಿ - ಸ್ವಲ್ಪ
- ಕೇಸರಿ - 4 ದಳ
ಮಾಡುವ ವಿಧಾನ...
- ಮೊದಲು ಅಕ್ಕಿಯನ್ನು ತೊಳೆದು 1 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು. ನಂತರ ನೀರನ್ನು ಆರಲು ಬಿಟ್ಟು ತರಿತರಿಯಾಗಿ ರುಬ್ಬಿಕೊಳ್ಳಬೇಕು.
- ಒಲೆಯ ಮೇಲೆ ಹಾಲನ್ನು ಇಟ್ಟು ಹಾಲು ಕಾದನ ನಂತರ ಪುಡಿ ಮಾಡಿಟ್ಟುಕೊಂಡ ಅಕ್ಕಿಯನ್ನು ಹಾಕಬೇಕು. ಇದಕ್ಕೆ ಹುರಿದುಕೊಂಡ ಗಸಗಸೆಯನ್ನು ಹಾಕಬೇಕು. 15 ನಿಮಿಷಗಳ ಚೆನ್ನಾಗಿ ಕುದಿಸಬೇಕು.
- ಮತ್ತೊಂದು ಒಲೆ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ತುಪ್ಪವನ್ನು ಹಾಕಿ, ದ್ರಾಕ್ಷಿ, ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
- ಅಕ್ಕಿ ಹಾಲಿನಲ್ಲಿ ಚೆನ್ನಾಗಿ ಬೆಂದ ನಂತರ ನಂತರ ಇದಕ್ಕೆ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಕೇಸರಿ, ಏಲಕ್ಕಿ ಪುಡಿ ಹಾಕಿ 5 ನಿಮಿಷ ಕುದಿಸಿದರೆ ರುಚಿಕರವಾದ ಗಸಗಸೆ ಅಕ್ಕಿ ಪಾಯಸ ಸವಿಯಲು ಸಿದ್ಧವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


