ಪುದೀನಾ ಪನ್ನೀರ್ ಪಲಾವ್
ಪುದೀನಾ ಪನ್ನೀರ್ ಪಲಾವ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಅಕ್ಕಿ - 2 ಬಟ್ಟಲು
- ಪನ್ನೀರ್ - 200 ಗ್ರಾಂ
- ಬಟಾಣಿ - 1 ಬಟ್ಟಲು
- ಪುದೀನಾ - 1 ಕಟ್ಟು
- ಈರುಳ್ಳಿ - 2
- ಹಸಿ ಮೆಣಸಿನಕಾಯಿ - 6-8
- ಶುಂಠಿ - ಸ್ವಲ್ಪ
- ಬೆಳ್ಳುಳ್ಳಿ - ಸ್ವಲ್ಪ
- ಲವಂಗ - ಸ್ವಲ್ಪ
- ಚಕ್ಕೆ - ಸ್ವಲ್ಪ
- ನೀರು - 4 ಬಟ್ಟಲು
- ಎಣ್ಣೆ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಶುಂಠಿ ಹಾಗೂ ಪುದೀನಾವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಕುಕ್ಕರ್ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದನಂತರ ಚಕ್ಕೆ ಲವಂಗ ಪುಡಿ ಮಾಡಿ ಹಾಕಬೇಕು.
- ನಂತರ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇದಕ್ಕೆ ಕತ್ತರಿಸಿದ ಪನ್ನೀರ್'ನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಬಟಾಣಿ ಹಾಕಿ. ಪುದೀನಾ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಹುರಿದುಕೊಳ್ಳಬೇಕು.
- ನಂತರ ತೊಳೆದ ಅಕ್ಕಿ ಹಾಗೂ ಉಪ್ಪು, ಅಳತೆ ನೀರು ಸೇರಿಸಿ ಕುಕ್ಕರಿನ ಮುಚ್ಚಳವನ್ನು ಹಾಕಿ 2 ವಿಶಲ್ ಕೂಗಿಸಿದರೆ ಪುದೀನಾ ಪನ್ನೀರ್ ಪಲಾವ್ ಸವಿಯಲು ಸಿದ್ಧವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


