ಅಡುಗೆ

ಗೊಜ್ಜವಲಕ್ಕಿ ಅಥವಾ ಹುಳಿ ಅವಲಕ್ಕಿ

ಗೊಜ್ಜವಲಕ್ಕಿ ಮಾಡುವ ವಿಧಾನ...

ಗೊಜ್ಜವಲಕ್ಕಿ ಅಥವಾ ಹುಳಿ ಅವಲಕ್ಕಿ
ಗೊಜ್ಜವಲಕ್ಕಿ
Published On :

ಬೇಕಾಗುವ ಪದಾರ್ಥಗಳು

  • ಒಂದು ದೊಡ್ಡ ಲೋಟದಲ್ಲಿ ಅವಲಕ್ಕಿ
  • ಒಂದು ನಿಂಬೆ ಹಣ್ಣಿನಷ್ಟು ಹುಣಿಸೆ ಹಣ್ಣು
  • ಸ್ವಲ್ಪ ಹುಳಿಸಾರು ಪುಡಿ
  • ಉಪ್ಪು
  • ಎಣ್ಣೆ
  • ಕಡಲೆ ಕಾಯಿ ಬೀಜ
  • ಕಡಲೆಬೇಳೆ
  • ಕೊಬ್ಬರಿ ತುರಿ
  • ಬೆಲ್ಲ ಸ್ವಲ್ಪ
  • ಕರಿಬೇವು
  • ಬ್ಯಾಡಗಿ ಮೆಣಸಿನಕಾಯಿ -3
  • ಸಾಸಿವೆ
  • ಅರಿಶಿಣ
  • ಹಿಂಗು
ಮಾಡುವ ವಿಧಾನ...
  • ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಪುಡಿ ಮಾಡಿಕೊಳ್ಳಬೇಕು
  • ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದುಕೊಳ್ಳಬೇಕು
  • ನಂತರ  ಆ ರಸಕ್ಕೆ ಹುಳಿ ಸಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ ಮಿಶ್ರಣ ಮಾಡಿ
  • ತೊಳೆದ ಅವಲಕ್ಕಿಯನ್ನು ಮಿಶ್ರಣಕ್ಕೆ ಹಾಕಿ ಕಲೆಸಿಡಿ
  • 15 ನಿಮಿಷ ನೆನೆಸಿಟ್ಟುಕೊಳ್ಳಿ
  • ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ
  • ಅದಕ್ಕೆ ಸಾಸಿವೆ, ಕರಿಬೇವು,ಬ್ಯಾಡಗಿ ಮೆಣಸಿನಕಾಯಿ, ಕಡಲೆಬೇಳೆ, ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಳ್ಳಿ
  • ನಂತರ ಅದಕ್ಕೆ ಅರಿಶಿಣ ತುರಿದ ಕೊಬ್ಬರಿ, ಹಿಂಗು ಹಾಕಿ, ಸ್ವಲ್ಪ ಬಾಡಿದ ನಂತರ ಅದಕ್ಕೆ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಇರುವಾಗಲೇ ಬಡಿಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.