ಅಡುಗೆ

ತರಕಾರಿ ಪನಿಯಾರ

ತರಕಾರಿ ಪನಿಯಾರ ಮಾಡುವ ವಿಧಾನ...

ತರಕಾರಿ ಪನಿಯಾರ
ತರಕಾರಿ ಪನಿಯಾರ
Published On :

ಬೇಕಾಗುವ ಪದಾರ್ಥಗಳು

ಹಿಟ್ಟಿಗೆ ಬೇಕಾದ ಪದಾರ್ಥಗಳು...

  • ಅಕ್ಕಿ - 1 ಬಟ್ಟಲು
  • ಉದ್ದಿನಬೇಳೆ - 2 ಬಟ್ಟಲು
  • ಅವಲಕ್ಕಿ - 1/2 ಬಟ್ಟಲು
  • ಉಪ್ಪು - ರುಚಿಗೆ ತಕ್ಕಷ್ಟು
  • ಸೋಡಾ - ಚಿಟಿಕೆ
ಪನಿಯಾರ ಮಾಡಲು ಬೇಕಾದ ಪದಾರ್ಥಗಳು...
  • ಈರುಳ್ಳಿ - 2-3 (ಸಣ್ಣದಾಗಿ ಹೆಚ್ಚಬೇಕು)
  • ಕ್ಯಾರೆಟ್ - 2
  • ದೊಡ್ಡ ಮೆಣಸಿನಕಾಯಿ - 2
  • ಕರಿಬೇವು - ಸ್ವಲ್ಪ
  • ಪುದೀನಾ - ಸ್ವಲ್ಪ
  • ಶುಂಠಿ - ಸ್ವಲ್ಪ
  • ಹಸಿಮೆಣಸಿನ ಕಾಯಿ - 4-5
  • ಎಣ್ಣೆ - ಸ್ವಲ್ಪ
  • ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
  • ಮೊದಲು ಅಕ್ಕಿ, ಉದ್ದಿನ ಬೇಳೆ ಹಾಗೂ ಅವಲಕ್ಕಿಯನ್ನು ಹಿಂದಿನ ದಿನ ಬೆಳಿಗ್ಗೆ ಚೆನ್ನಾಗಿ ತೊಳೆದು ಪ್ರತ್ಯೇಕ ಪಾತ್ರೆಯಲ್ಲಿ ನೆನೆ ಹಾಕಬೇಕು. ಸಂಜೆ ವೇಳೆ ನೀರನ್ನು ಬಸಿದು ಪ್ರತ್ಯೇಕವಾಗಿ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಿ ಪಾತ್ರೆ ಮೇಲೆ ಒಂದು ಮುಚ್ಚಳ ಮುಚ್ಚಿಡಬೇಕು. ರಾತ್ರಿ ಪೂರ್ತಿ ಹಿಟ್ಟು ನೆನೆಯಲು ಬಿಡಬೇಕು.
  • ನಂತರ ಈರುಳ್ಳಿ, ಉಳಿದ ತರಕಾರಿ, ಶುಂಠಿ, ಪುದೀನ, ಹಸಿಮೆಣಸಿನ ಕಾಯಿ ಎಲ್ಲವನ್ನೂ ಸಣ್ಣಗೆ ಹೆಚ್ಚಿಕೊಳ್ಳಬೇಕು.
  • ರುಬ್ಬಿ, ರಾತ್ರಿಯಿಡೀ ನೆನೆಸಿಕೊಂಡ ಹಿಟ್ಟಿಗೆ ಸ್ವಲ್ಪ ಸೋಡಾ ಹಾಗೂ ಸಣ್ಣಗೆ ಹೆಚ್ಚಿದ ತರಕಾರಿ, ಉಳಿದ ಪದಾರ್ಥಗಳನ್ನು ಹಾಕಬೇಕು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು
  • ಒಗ್ಗರಣೆ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಒಗ್ಗರಣೆ ತಣ್ಣಗಾದ ನಂತರ ಇದನ್ನು ಇಡ್ಲಿ ಹಿಟ್ಟಿಗೆ ಹಾಕಬೇಕು.
  • ಪನಿಯಾರ ಮಾಡುವ ಇಡ್ಲಿ ಪ್ಲೇಟ್ ನ್ನು ಒಲೆಯ ಮೇಲಿಡಬೇಕು. ಬಿಸಿಯಾದ ನಂತರ ಸ್ವಲ್ಪ ಪ್ರತೀಯೊಂದು ಅಚ್ಚುಗಳಿಗೆ ಎಣ್ಣೆ ಹಾಕಿ ಅದಕ್ಕೆ ಈಗಾಗಲೇ ತಯಾರು ಮಾಡಿಕೊಂಡ ಹಿಟ್ಟನ್ನು ಹಾಕಬೇಕು. ಸಣ್ಣೆ ಉರಿಯಲ್ಲಿ ಎರಡೂ ಬದಿಯಲ್ಲೂ ಬೇಯಿಸಿದರೆ ರುಚಿಕರವಾದ ತರಕಾರಿ ಪನಿಯಾರ ಸವಿಯಲು ಸಿದ್ಧವಾಗುತ್ತದೆ. ಪನಿಯಾರವನ್ನು ಚಟ್ನಿಪುಡಿ ಅಥವಾ ಟೊಮೆಟೋ ಚಟ್ನಿಯೊಂದಿಗೆ ತಿಂದರೆ ಇದರ ರುಚಿ ಮತ್ತಷ್ಟು ಹೆಚ್ಚಾಗಿರುತ್ತದೆ. ಚಟ್ನಿ ಪುಡಿ ಮಾಡುವ ವಿಧಾನವನ್ನು ಈ ಹಿಂದಿನ ಸಂಚಿಕೆಯಲ್ಲಿಯೇ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.