ಮಾವಿನಕಾಯಿ ಚಿತ್ರಾನ್ನ
ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ...

Published On :
ಪದಾರ್ಥಗಳು
- ಅಕ್ಕಿ– ಅರ್ಧ ಸ್ವಲ್ಪ
- ಮಾವಿನಕಾಯಿ – 2
- ತೆಂಗಿನಕಾಯಿ ತುರಿ – ಅರ್ಧ ಬಟ್ಟಲು
- ಬೆಲ್ಲ – ರುಚಿಗೆ ತಕ್ಕಷ್ಟು
- ಹಸಿ ಶುಂಠಿ – ಒಂದು ಸಣ್ಣ ಚೂರು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಕರಿಬೇವು ಸೊಪ್ಪು – ಸ್ವಲ್ಪ
- ಎಣ್ಣೆ – ಬೇಕಾದಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
- ಸಾಸಿವೆ – ಅರ್ಧ ಚಮಚ
- ಕಡಲೆ ಬೇಳೆ- ಉದ್ದಿನಬೇಳೆ – 1 ಚಮಚ
- ಕಡಲೇ ಬೀಜ- 1 ಚಮಚ
ಮಾಡುವ ವಿಧಾನ
- ಅಕ್ಕಿ, ತೆಂಗಿನ ಕಾಯಿ ತುರಿ, ಹಸಿಮೆಣಸಿನಕಾಯಿ, ಅರ್ಧ ಸಾಸಿವೆ ಮತ್ತು ಶುಂಠಿ, ಉಪ್ಪ ಬೆರೆಸಿ ರುಬ್ಬಿಕೊಳ್ಳಿರಿ. ನಂತರ ಅನ್ನ ತಯಾರಿಸಿಕೊಳ್ಳಿರಿ.
- ಮಾವಿನ ಕಾಯಿ ತೊಳೆದು ತುರಿದುಕೊಂಡು ರುಬ್ಬಿದಮಿಶ್ರಣಕ್ಕೆ ಬೆರೆಸಿಕೊಳ್ಳಿರಿ. ಈಗಅಗಲವಾದ ಒಂದುಪಾತ್ರೆಯಲ್ಲಿ ಅನ್ನ ಹಾಕಿ ಅದರ ಮೇಲೆ ರುಬ್ಬಿದ ಮಿಶ್ರಣವನ್ನು ಉದುರಿಸಿ.
- ಒಂದು ಕಡಾಯಿಯಲ್ಲಿ ಎಣ್ಣೆ , ಸಾಸಿವೆ, ಕಡಲೆ ಬೇಳೆ-ಉದ್ದಿನಬೇಳೆ, ಕಡಲೇ ಬೀಜ, ಬೆಲ್ಲಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದನ್ನು ಅನ್ನದಲ್ಲಿ ಹಾಕಿ ಎಲ್ಲವನ್ನೂಚೆನ್ನಾಗಿಕಲಸಿರಿ. ಈಗ ಕೊತ್ತಂಬರಿ ಸೊಪ್ಪು ಹಚ್ಚಿಕೊಂಡು ಬೆರೆಸಿರಿ. ಈಗರುಚಿಕರ ಮಾವಿನಕಾಯಿಚಿತ್ರಾನ್ನ ತಯಾರಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


