ಮಸಾಲೆ ಚಿತ್ರಾನ್ನ
ಮಸಾಲೆ ಚಿತ್ರಾನ್ನ ಮಾಡುವ ವಿಧಾನ...

Published On :
ಸಾಮಾಗ್ರಿಗಳು
- ಈರುಳ್ಳಿ-5
- ಬೆಳ್ಳುಳ್ಳಿ- 20-25 ಎಸಳು
- ಜೀರಿಗೆ-1 ಚಮಚ
- ಕಾಳು ಮೆಣಸು-1 ಚಮಚ
- ಅರಿಶಿನ- ಅರ್ಧ ಚಮಚ
- ಟೊಮೆಟೋ- 3
- ಕಡಲೆಬೀಜ-2 ಚಮಚ
- ಕಡಲೆಬೇಳೆ, ಉದ್ದಿನಬೇಳೆ- 1 ಚಮಚ
- ಕರಿಬೇವು- 2 ಕಡ್ಡಿ
- ಸಾಸಿವೆ- ಅರ್ಧ ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಎಣ್ಣೆ - ಸ್ವಲ್ಪ
- ಉಪ್ಪು-1 ಚಮಚ
ಮಾಡುವ ವಿಧಾನ
- ಮೊದಲೇ ಉದುರು-ಉದುರುವಾಗಿ ಅನ್ನ ಮಾಡಿಟ್ಟುಕೊಳ್ಳಬೇಕು.
- ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಬೇಕು, ನಂತರ ಇದಕ್ಕೆಜೀರಿಗೆಯನ್ನು ಹಾಕಿ ಪುಡಿ ಮಾಡಿ, ಬೆಳ್ಳುಳ್ಳಿ ಹಾಕಿ ನುಣ್ಣಗೆ ಜಜ್ಜಿಕೊಳ್ಳಿಬೇಕು.
- ಈರುಳ್ಳು, ಟೊಮೆಟೋ ಹಾಗೂ ಕೊತ್ತಂಬರಿ ಸೊಪ್ಪನ್ನುಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು.
- ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚೆನ್ನಾಗಿ ಕಾದ ನಂತರಸಾಸಿವೆ ಹಾಕಿ ಅದು ಚಟಪಟ ಎಂದು ಶಬ್ಧ ಬಂದ ಮೇಲೆ ಕರಿಬೇವು ಹಾಕಬೇಕು. ಕಡಲೆಬೀಜ ಹಾಕಿ ಸ್ವಲ್ಪಕೆಂಪಗಾದ ನಂತರ ಕಡಲೆಬೇಳೆ, ಉದ್ದಿನಬೇಳೆ ಹಾಕಿ ಬಾಡಿಸಿಕೊಳ್ಳಬೇಕು.
- ನಂತರ ಈರುಳ್ಳು ಹಾಕಿ ಚಿನ್ನದ ಬಣ್ಣ ಬರುವವರೆಗೆಬಾಡಿಸಬೇಕು, ಟೊಮೆಟೋ ಹಾಕಿ ಕೆಂಪಗಾಗಲು ಬಿಡಿ.
- ಇದಾದನಂತರ ಇದಕ್ಕೆ ಅರಿಶಿನ, ಉಪ್ಪು, ಮೆಣಸು, ಜೀರಿಗೆಹಾಗೂ ಬೆಳ್ಳುಳ್ಳಿ ಕುಟ್ಟಿಟ್ಟುಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಈ ಮೊದಲೇ ಮಾಡಿಟ್ಟುಕೊಂಡಿದ್ದ ಅನ್ನಕ್ಕೆ ಈ ಮಸಾಲೆಯನ್ನುಹಾಕಿ ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ, ಮಸಾಲೆಚಿತ್ರಾನ್ನ ತಯಾರಾಗುತ್ತದೆ. ಶೀತ, ನೆಗಡಿಯಾಗಿದ್ದ ಸಂದರ್ಭದಲ್ಲಿ ಇದನ್ನು ತಿಂದರೆ ನಿವಾರಣೆಯಾಗುತ್ತದೆ.ಬಾಯಿಗೂ ರುಚಿಕರವಾಗಿರುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


