ಚನ್ನಾಕರಿ
ಚನ್ನಾಕರಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಕಾಬೂಲ್ ಕಡಲೆಕಾಳು - ಕಾಲು ಕೆಜಿ
- ಗರಂ ಮಸಾಲಾ - 1 ಚಮಚ
- ಮಾವಿನಕಾಯಿ ಪುಡಿ- ಅರ್ಧ ಚಮಚ
- ಈರುಳ್ಳಿ - 2
- ಟೊಮೆಟೊ- 2
- ಶುಂಠಿ,ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಖಾರದ ಪುಡಿ - 1 ಚಮಚ
- ಜೋಳದ ಹಿಟ್ಟು - ಅರ್ಧ ಬಟ್ಟಲು
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು
ಮಾಡುವ ವಿಧಾನ
- ಕಡಲೆಕಾಳು ಕರಿ ತಯಾರಿಸಲು ಹಿಂದಿನ ದಿನದ ರಾತ್ರಿಯೇ ಕಾಬೂಲ್ ಕಡಲೆಕಾಳುಗಳನ್ನು ನೆನೆ ಹಾಕಿಕೊಳ್ಳಬೇಕು.
- ನಂತರ ಕುಕ್ಕರಿನಲ್ಲಿ ನೆನೆಸಿದ ಕಾಬೂಲ್ ಕಡಲೆಕಾಳುಗಳನ್ನು ಬೇಯಿಸಿಕೊಳ್ಳಬೇಕು.
- ಒಂದು ಬಾಣಲೆಗೆ ಜೋಳದ ಹಿಟ್ಟು, ಉಪ್ಪು, ಖಾರದ ಪುಡಿ, ಬೆಂದ ಕಡಲೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಗಟ್ಟಿಯಾಗಿ ಮಿಶ್ರಣ ಮಾಡಬೇಕು.
- ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಹಿಟ್ಟಿನಲ್ಲಿ ಕಲಸಿಟ್ಟ ಕಡಲೆಕಾಳುಗಳನ್ನು ಕರಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು.
- ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ ಹುರಿದುಕೊಳ್ಳಬೇಕು. ಈರುಳ್ಳಿ ಚಿನ್ನದ ಬಣ್ಣ ಬಂದ ನಂತರ ಟೊಮೆಟೊ ಪ್ಯೂರಿ ಸೇರಿಸಿ ಮತ್ತೆ 3 ನಿಮಿಷ ಹುರಿಯಬೇಕು. ಇದಕ್ಕೆ ಖಾರದ ಪುಡಿ, ಗರಂ ಮಸಾಲಾ, ಉಪ್ಪು, ಮಾವಿನಕಾಯಿ ಪುಡಿ ಹಾಕಿ ಕುದಿಸಬೇಕು.
- ಈ ಮಸಾಲೆಗೆ ಕರಿದಿಟ್ಟ ಕಡಲೆಕಾಳುಗಳನ್ನು ಹಾಕಿದರೆ ಬಿಸಿಬಿಸಿಯಾದ ಗರಿಯಾದ ಕಾಬೂಲ್ ಕಡಲೆಕಾಳಿನ ಕರಿ ತಯಾರಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


