ಗೋಬಿ ಮಂಚೂರಿ
ಗೋಬಿ ಮಂಚೂರಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಹೂಕೋಸು -1
- ಕತ್ತರಿಸಿದ ಈರುಳ್ಳಿ- 2
- ದುಂಡು ಮೆಣಸು 2
- ಟೊಮೆಟೊ - 2
- ಕಡಲೆ ಹಿಟ್ಟು-ಸ್ವಲ್ಪ
- ಧಾನ್ಯಗಳ ಹಿಟ್ಟು - 1/2 ಕಪ್
- ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
- ಹಸಿಮೆಣಸುಕಾಯಿ - 8
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಬೆಳ್ಳುಳ್ಳಿ ಎಸಳು - 6
- ಕರಿಮೆಣಸು - 2 ಚಮಚ
- ಸೋಯಾ ಸಾಸ್ - 2 ಚಮಚ
- ಅಜಿನೊಮೊಟೊ - 1 ಚಿಟುಕು
- ಎಣ್ಣೆ - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
- ಕತ್ತರಿಸಿದ ಹೂಕೋಸನ್ನು ಉಪ್ಪು ಹಾಕಿ ಬೇಯಿಸಬೇಕು. ಬೇಯಿಸುವಾಗ ಪಾತ್ರೆಯ ಬಾಯಿಯನ್ನು ಮುಚ್ಚಿ ಬೇಯಿಸಬೇಕು.
- ನೀರನ್ನು ಬಸಿದು ಹೂಕೋಸನ್ನು ಅಗಲವಾದ ಪಾತ್ರೆಯಲ್ಲಿ ಆರಲು ಇಡಬೇಕು ಇದರಿಂದ ಹೂಕೋಸಿನಲ್ಲಿ ನೀರು ಆವಿಯಾಗುತ್ತದೆ.
- ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕಟಲೆಹಿಟ್ಟು, ಜೋಳದ ಹಿಟ್ಟು, ಕತ್ತರಿಸಿದ ಮೆಣಸಿಕಾಯಿ ಅರ್ಧ, ಕರಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ , ನೀರು ಹಾಕಿ ಗಟ್ಟಿಯಾಗಿ ಕಲಿಸಬೇಕು.
- ನಂತರ ಅರ್ಧ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕುದಿಯುವಾಗ ಅದರಲ್ಲಿ ಹೂಕೋಸನ್ನು ಹಿಟ್ಟಿನೊಂದಿಗೆ ಬೆರೆಸಿ ಹಾಕಬೇಕು. ನಂತರ ಉರಿಯನ್ನು ಕಡಿಮೆಮಾಡಿ ಅದನ್ನು ಎಣ್ಣೆಯಲ್ಲಿ ಮತ್ತಷ್ಟು ಹುರಿಯುವಂತೆ ಮಾಡಬೇಕು .
- ಹುರಿದ ಹೂಕೋಸನ್ನು ತೆಗೆದು ಪೇಪರಿನಲ್ಲಿ ಇಡಬೇಕು.
- ನಂತರ ಮತ್ತೊಂದು ಬಾಣಲೆಯನ್ನು ತೆಗೆದು ಅದಕ್ಕ ಎಣ್ಣೆ ಹಾಕಿ ಬಿಸಿಯಾದಾಗ ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು. ಅದು ಕಂದು ಬಣ್ಣಕ್ಕೆ ತಿರುವಾಗ ಬೆಳ್ಳುಳ್ಳಿ ಮತ್ತು ಕರಿಮೆಣಸು ಹಾಕಿ ಬಿಸಿ ಮಾಡಬೇಕು.
- ಅದಕ್ಕೆ ಟೊಮೆಟೊ ಹಾಕಿ, ಕತ್ತರಿಸಿದ ಉಳಿದ ಮೆಣಸು ಮತ್ತು ದುಂಡು ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- 3-4 ನಿಮಿಷ ಬೇಯಿಸಿದ ನಂತರ ಅಜಿನೊಮಿಟೊ ಮತ್ತು ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ, ಅದಕ್ಕೆ 3/4 ನೀರು ಹಾಕಿ ಕುದಿಸಬೇಕು.
- ಗ್ರೇವಿ ಬಿಸಿಯಾಗಿ ಗುಳ್ಳೆಗಳು ಬರಲಾರಭಿಸಿದಾಗ ಹುರಿದ ಮಂಚೂರಿ ಹಾಕಿ 5 ನಿಮಿಷ ಕಾಯಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


