ಅಡುಗೆ

ಕಡಲೆಪುರಿ ಬಾತ್

ರುಚಿಕರವಾದ ಕಡಲೆಪುರಿ ಬಾತ್...

ಕಡಲೆಪುರಿ ಬಾತ್
ಕಡಲೆಪುರಿ ಬಾತ್
Published On :

ಸಾಮಾಗ್ರಿಗಳು:

  • (ಬೆಂಗಳೂರು)ಕಡಲೆಪುರಿ-5 ಲೀಟರ್
  • ಹುರಿಗಡಲೆ-50ಗ್ರಾಂ
  • ಖಾರದ ಪುಡಿ-2 ಚಮಚ
  • ಉಪ್ಪು-1.1/2 ಚಮಚ
  • ಕರಿಬೇವು-2ಕಡ್ಡಿ
  • ಸಾಸಿವೆ-1/2 ಚಮಚ
  • ಈರುಳ್ಳಿ-4
  • ಬೆಳ್ಳುಳ್ಳಿ- 10 ಎಸಳು
  • ಕೊತ್ತಂಬರಿಸೊಪ್ಪು-4 ಕಡ್ಡಿ
  • ಟೊಮ್ಯಾಟೋ-3
  • ಎಣ್ಣೆ-30-35 ಚಮಚ

 ಮಾಡುವ ವಿಧಾನ:

ಹುರಿಗಡಲೆ,ಬೆಳ್ಳುಳ್ಳಿ, ಖಾರದಪುಡಿ, ಉಪ್ಪು1/2 ಚಮಚ ಎಲ್ಲವನ್ನು ಮಿಕ್ಸಿಜಾರ್ ಗೆ ಹಾಕಿ ಪುಡಿಮಾಡಿಟ್ಟುಕೊಳ್ಳಬೇಕು. ನಂತರ ಸ್ವಚ್ಛಗೊಳಿಸಿದ ಕಡಲೆಪುರಿಯನ್ನುನೀರಿನಲ್ಲಿ ನೆನೆಸಿ, ನೀರು ಇಲ್ಲದಂತೆಹಿಂಡಿ ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು.ಬಾಣಲೆಗೆ ಎಣ್ಣೆ ಹಾಕಿ ನಂತರಸಾಸಿವೆ, ಕರಿಬೇವು ಹಾಕಬೇಕು ಕೆಂಪಗಾಗುತ್ತಿದ್ದಂತೆಯೇಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದಬಣ್ಣ ಬರುವವರೆಗೂ ಬಿಡಬೇಕು. ಟೊಮ್ಯಾಟೋ ಹಾಕಿ ಬೆಂದ ನಂತರಈ ಮೊದಲೇ ಮಾಡಿಟ್ಟುಕೊಂಡಿದ್ದಹುರಿಗಡಲೆ ಪುಡಿ ಹಾಗೂ ಉಪ್ಪನ್ನುಹಾಕಿ 2 ನಿಮಿಷ ಕೈಯಾಡಿಸಬೇಕು. ಇದಾದಮೇಲೆ ನೆನೆಸಿಟ್ಟುಕೊಂಡಿದ್ದ ಕಡಲೆಪುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣಮಾಡಿ ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಒಂದೆರಡು ನಿಮಿಷಒಲೆಯ ಮೇಲೆ ಬಿಸಿಯಾಗಲು ಬಿಟ್ಟರೆ ಕಡಲೆಪುರಿ ಬಾತ್ ತಿನ್ನಲು ಸಿದ್ಧವಾಗುತ್ತದೆ.

- ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.