ತೊಗರಿಬೇಳೆ ತೊವ್ವೆ/ಹೆಸರುಬೇಳೆ ತೊವ್ವೆ

ಸಾಮಗ್ರಿಗಳು
1. ತೊಗರಿಬೇಳೆ- 1 ಪಾವು
2. ತರಕಾರಿ- ಹೀರೆಕಾಯಿ ಅಥವಾ ಟೊಮೆಟೊ ಕಾಯಿ(1/2 ಕೆ.ಜಿ)
3. ಹಸಿಮೆಣಸಿನಕಾಯಿ- 7 ಚಿಕ್ಕದು
4. ಎಣ್ಣೆ- 1 ಟೀ ಚಮಚ
5. ಸಾಸಿವೆ- 1 ಟೀ ಚಮಚ
6. ಉದ್ದಿನಬೇಳೆ- 1 ಟೀ ಚಮಚ
7. ಕಡಲೆಬೇಳೆ- 1 ಟೀ ಚಮಚ
8. ಹಸಿ ಕೊಬ್ಬರಿ- 1 ಬಟ್ಟಲು
9. ಉಪ್ಪು, ಇಂಗು- ರುಚಿಗೆ ತಕ್ಕಷ್ಟು
10. ಕರಿಬೇವು, ಕೊತ್ತಂಬರಿಸೊಪ್ಪು
ಮಾಡುವ ವಿಧಾನ
ಬೇಳೆಯನ್ನು ಸ್ವಲ್ಪ ನೀರಿಟ್ಟು ಬೇಯಿಸಿ. ಎಣ್ಣೆ ಕಾಯಿಸಿ, ಸಾಸಿವೆ ಹಾಕಿ, ಹಸಿಮೆಣಸಿನಕಾಯಿ, ಉದ್ದಿನಬೇಳೆ, ಕಡಲೆಬೇಳೆ ಒಗ್ಗರಣೆ ಮಾಡಿ ಅದರಲ್ಲಿ ತರಕಾರಿಯನ್ನು ಬೇಯಿಸಿ. ಬೆಂದ ಬೇಳೆ, ತರಕಾರಿಯನ್ನು ಬೆರೆಸಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ. ಕೊತ್ತಂಬರಿ, ಕರಿಬೇವು, ಇಂಗು, ಕೊಬ್ಬರಿ ತುರಿ ಹಾಕಿ ಕುದಿಸಿ. ಇದನ್ನು ಅನ್ನದ ಜೊತೆ ಕಲಸಿಕೊಂಡು ತಿನ್ನುವಾಗ ಜೊತೆಯಲ್ಲಿ ಉಪ್ಪು, ಮೆಣಸಿನಕಾಯಿ, ಕುಂಬಳಕಾಯಿ ಬಾಳಕ, ಸಂಡಿಗೆ, ಹಪ್ಪಳ ಇದ್ದರೆ ಚೆನ್ನ.
ಸೂಚನೆ: ಹೆಸರುಬೇಳೆಯನ್ನು ಹುರಿದು ಬೇಯಿಸಿ.
- ಶ್ರೀದೇವಿ
(ಸಖಿ ಪಾಕ್ಷಿಕದಿಂದ ಆಯ್ದ ಲೇಖನ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


