ಈರುಳ್ಳಿ ಪಕೋಡಾ
ಸಾಯಂಕಾಲದ ಮಳೆ, ಬಿಸಿ ಕಾಫಿ ಜೊತೆಗೆ ಬಿಸಿಬಿಸಿಯಾದ ಈರುಳ್ಳಿ ಪಕೋಡಾ. ಮಕ್ಕಳಿಗೆ ವಯಸ್ಸಾದವರಿಗೆ ತುಂಬಾ ಅಚ್ಚು ಮೆಚ್ಚು.

ಸಾಯಂಕಾಲದ ಮಳೆ, ಬಿಸಿ ಕಾಫಿ ಜೊತೆಗೆ ಬಿಸಿಬಿಸಿಯಾದ ಈರುಳ್ಳಿ ಪಕೋಡಾ. ಮಕ್ಕಳಿಗೆ ವಯಸ್ಸಾದವರಿಗೆ ತುಂಬಾ ಅಚ್ಚು ಮೆಚ್ಚು. ಅಂಗಡಿಯಿಂದ ತರುವ ಬದಲು ಮನೆಯಲ್ಲೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನುವುದು ಉತ್ತಮ.
ಬೇಕಾಗುವ ಪದಾರ್ಥಗಳು
- ಈರುಳ್ಳಿ - 2
- ಕಡ್ಲೆಹಿಟ್ಟು - 1ಕಪ್
- ಖಾರದ ಪುಡಿ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಅಡುಗೆ ಸೋಡಾ - ಚಿಟಿಕೆ
- ಜೀರಿಗೆ ಸ್ವಲ್ಪ
- ಕರಿಬೇವಿನ ಸೊಪ್ಪು, ಪುದಿನ, ಕೊತ್ತಂಬರಿ ಸೊಪ್ಪು
- ಎಣ್ಣೆ - ಕರಿಯಲು ಬೇಕಾದಷ್ಟು
ಮಾಡುವ ವಿಧಾನ
ಮೊದಲಿಗೆ ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಕತ್ತರಿಸಿದ ಈರುಳ್ಳಿ, ಅಚ್ಚಖಾರದಪುಡಿ, ಸೋಡಾ, ಉಪ್ಪು, ಹೆಚ್ಚಿದ ಕರಿಬೇವಿನ ಸೊಪ್ಪು, ಪುದಿನ, ಕೊತ್ತಂಬರಿ ಸೊಪ್ಪುಕಾಯಿಸಿದ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ.
ಈಗ ಕಲಸಿಟ್ಟ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಕೈಯಲ್ಲಿ ಅಥವಾ ಸ್ಪೂನ್ ನಿಂದ ಹಾಕಿ ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರೆದು ಪೆಪರ್ ಟವೆಲ್ ಮೇಲೆ ಹಾಕಿ. ಬಳಿಕ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಗರಿಗರಿಯಾದ ಈರುಳ್ಳಿ ಪಕೋಡ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


