ರಾಗಿ ಬಿಸ್ಕೆಟ್
ರಾಗಿ ಬಿಸ್ಕೆಟ್ ಮಾಡುವ ವಿಧಾನ...

Published On :
ಬೇಕಾಗುವ ಸಾಮಾಗ್ರಿಗಳು
- ರಾಗಿ ಹಿಟ್ಟು - 2 ಬಟ್ಟಲು
- ಸಕ್ಕರೆ ಪುಡಿ- 3/4 ಬಟ್ಟಲು
- ತುಪ್ಪ - 1 ಬಟ್ಟಲು
- ಏಲಕ್ಕಿ ಪುಡಿ - ಅರ್ಧ ಚಮಚ
- ಅಡುಗೆ ಸೋಡಾ - 1 ಚಮಚ
- ಉಪ್ಪು - ಸ್ವಲ್ಪ
ಮಾಡುವ ವಿಧಾನ
- ಒಲೆಯ ಮೇಲೆ ಬಾಣಲೆಯಿಟ್ಟು ರಾಗಿ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಇದಕ್ಕೆ ಸಕ್ಕರೆ ಪುಡಿ, ಅಡುಗೆ ಸೋಡಾ ಹಾಗೂ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
- ಸಕ್ಕರೆ ಮಿಶ್ರಿತವಾಗುತ್ತಿದ್ದಂತೆ ರಾಗಿ ಹಿಟ್ಟು ಸ್ವಲ್ಪ ಗಟ್ಟಿಯಾಗುತ್ತದೆ. ಇದಕ್ಕೆ ಕಾಯಿಸಿದ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹುರಿಯಿರಿ. ಅಗತ್ಯವೆನಿಸಿದರೆ ಮತ್ತೆ ತುಪ್ಪ ಹಾಕಬಹುದು.
- ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅಥವಾ ನಿಮಗೆ ಬೇಕಿರುವ ಆಕಾರದಲ್ಲಿ ಮಾಡಿಕೊಂಡು ಕುಕ್ಕಿ ಬೇಕಿಂಗ್ ಟ್ರೇಗೆ ಹಾಕಬೇಕು.
- ನಂತರ ಓವನ್ ನಲ್ಲಿ 350-400 ಡಿಗ್ರಿ (ಪ್ಯಾರನ್ ಹೀಟ್) ನಲ್ಲಿ, 12-15 ನಿಮಿಷವಿಡಬೇಕು.
ಸೂಚನೆ:
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


