ಅಡುಗೆ

ಚನಾ ಬಿರಿಯಾನಿ

ಚನಾ ಬಿರಿಯಾನಿ ಮಾಡುವ ವಿಧಾನ...

ಚನಾ ಬಿರಿಯಾನಿ
ಚನಾ ಬಿರಿಯಾನಿ
Published On :

ಬೇಕಾಗುವ ಪದಾರ್ಥಗಳು

  • ಬಾಸುಮತಿ ಅಕ್ಕಿ - 2 ಕಪ್
  • ಪುದೀನಾ ಸೊಪ್ಪು - ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಹಸಿಮೆಣಸಿನಕಾಯಿ - 2
  • ಕೇಸರಿ - ಚಿಟಿಕೆಯಷ್ಟು
  • ಕೆನೆಯಿಲ್ಲದ ಹಾಲು - ಅರ್ಧ ಕಪ್
  • ಎಣ್ಣೆ - 1 ಚಮಚ
ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು
  • ಚನಾ - 1 ಕಪ್
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ
  • ಅರಿಶಿಣ ಪುಡಿ - 1ಚಮಚ
  • ಖಾರದ ಪುಡಿ - ಅರ್ಧ ಚಮಚ
  • ದನಿಯಾ ಪುಡಿ - 1 ಚಮಚ
  • ಮೊಸರು - 1 ಕಪ್
  • ಟೊಮೆಟೋ - 3 ಕತ್ತರಿಸಿದ್ದು
  • ಆಲೂಗಡ್ಡೆ - 2 (ಬೇಯಿಸಿ ಕತ್ತರಿಸಿದ್ದು)
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - 1 ಚಮಚ
  • ನೀರು - 2 ಕಪ್
ಮಾಡುವ ವಿಧಾನ
  • ಮೊದಲಿಗೆ ಕಡಲೆ ಮಸಾಲೆ ತಯಾರು ಮಾಡಿಕೊಳ್ಳಬೇಕು.
  • ಚನಾವನ್ನು ಕಡಿಮೆಯೆಂದರೂ 6 ಗಂಟೆಕಾಲ ನೆನೆ ಹಾಕಬೇಕು
  • ನಂತರ ಕಡಲೆಗೆ 2 ಕಪ್ ನೀರು ಮತ್ತು ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ
  • ಈಗ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಶುಂಠಿ-ಬೆಳ್ಳುಳ್ಳು ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ
  • ನಂತರ ಖಾರದ ಪುಡಿ, ಅರಿಶಿಣದ ಪುಡಿ, ದನಿಯಾ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿ.
  • ನಂತರ ಕತ್ತರಿಸಿದ ಟೊಮೆಟೋ ಹಾಕಿ 4-5 ನಿಮಿಷ ಫ್ರೈ ಮಾಡಿ.
  • ನಂತರ ಬೇಯಿಸಿದ ಆಲುಗಡ್ಡೆ, ಹಸಿಮೆಣಸಿನಕಾಯಿ ಮತ್ತು ಮೊಸರು ಹಾಕಿ 5-6 ನಿಮಿಷ ಬೇಯಿಸಿ.
  • ಈಗ ಬೇಯಿಸಿದ ಕಡೆಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ರೇವಿ ರೆಡಿಯಾದ ಬಳಿಕ ಉರಿಯಿಂದ ಇಳಿಸಿ.
ಬಿರಿಯಾನಿ ತಯಾರು ಮಾಡಿಕೊಳ್ಳಬೇಕು
  • ಕೇಸರಿಯನ್ನು ಹಾಲಿನಲ್ಲಿ ನೆನೆ ಹಾಕಿ ಇಡಿ.
  • ಅನ್ನ ಮುಕ್ಕಾಲು ಭಾಗ ಬೆಂದಾಗ ಅದರ ನೀರು ಬಸಿಯಿರಿ. ನಂತರ ಆ ಅನ್ನಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ.
  • ಈಗ ಬಿರಿಯಾನಿ ಮಾಡುವ ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಸವರಿ. ನಂತರ ಮುಕ್ಕಾಲು ಭಾಗ ಅನ್ನದಲ್ಲಿ ಸ್ವಲ್ಪ ಅನ್ನ ಹಾಕಿ ನಂತರ ಕಡಲೆ ಗ್ರೇವೆ ಹಾಕಿ. ನಂತರ ಪುನಃ ಅನ್ನ ಹಾಕಿ ದೊಡ್ಡ ಕಡಲೆಯ ಗ್ರೇವೆ ಹಾಕಿ. ಕೊನೆಯ ಪದರವಾಗಿ ಅನ್ನಹಾಕಿ ನಂತರ ಕೇಸರಿ ಹಾಲು ಹಾಕಿ.
  • ಅದರ ಮೇಲೆ ಉಳಿದ ಗ್ರೇವಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಚನಾ  ಬಿರಿಯಾನಿ ರೆಡಿ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.