ನವರತನ್ ಕುರ್ಮಾ
ನವರತನ್ ಕುರ್ಮಾ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಹುರುಳಿಕಾಯಿ - 100 ಗ್ರಾಂ
- ಕ್ಯಾರೆಟ್- 100 ಗ್ರಾಂ
- ಆಲೂಗಡ್ಡೆ - 2
- ಬಟಾಣಿ - 100 ಗ್ರಾಂ
- ಕಾಲಿಫ್ಲವರ್ - 50 ಗ್ರಾಂ
- ಈರುಳ್ಳಿ - 4
- ಟೊಮೆಟೊ - 4
- ಚನ್ನಾ ಕಾಬೂಲ್ ಕಡಲೆ - 50 ಗ್ರಾಂ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಜೀರಿಗೆ - 1 ಚಮಚ
- ಎಣ್ಣೆ - 2 ಚಮಚ
ಗರಂ ಮಸಾಲಾಗೆ ಬೇಕಾಗುವ ಪದಾರ್ಥಗಳು
- ಗಸಗಸೆ - 1 ಚಮಚ
- ಚಕ್ಕೆ - ಚೂರು
- ಲವಂಗ - 2
- ಮೆಣಸು - 2
- ಜೀರಿಗೆ - ಅರ್ಧ ಚಮಚ
- ಏಲಕ್ಕಿ - 2
- ಜಾಯಿಕಾಯಿ - ಸ್ವಲ್ಪ
- ಪತ್ರೆ - ಸ್ವಲ್ಪ
- ಪುದೀನಾ - ಸ್ವಲ್ಪ
- ಶುಂಠಿ - ಸ್ವಲ್ಪ
- ಮೆಣಸಿನಕಾಯಿ - 2
- ಸಾರಿನಪುಡಿ - 2 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ದ್ರಾಕ್ಷಿ - 50 ಗ್ರಾಂ
- ಗೋಡಂಬಿ - 50 ಗ್ರಾಂ
- ಪಿಸ್ತಾ - 50 ಗ್ರಾಂ
ಮಾಡುವ ವಿಧಾನ
- ಚನ್ನಾವನ್ನು ಆರು ಗಂಟೆಗಳ ಕಾಲ ನೆನೆಸಿ. ತರಕಾರಿಗಳನ್ನು ನೀರಿನಿಂದ ತೊಳೆಯಿರಿ. ಗರಂ ಮಸಾಲೆಯ ಪದಾರ್ಥಗಳನ್ನೆಲ್ಲಾ ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ತರಕಾರಿಗಳನ್ನು ಹೆಚ್ಚಿಕೊಂಡು ಬೇಯಿಸಿ. ಚೆನ್ನಾ ನೆಂದ ಬಳಿಕ ಕುಕ್ಕರಿನಲ್ಲಿಟ್ಟು ಬೇಯಿಸಿರಿ. ಈರುಳ್ಳಿ ಮತ್ತು ಟೊಮೆಟೋವನ್ನು ಸಣ್ಣದಾಗಿಹೆಚ್ಚಿಬರೆ ಇಟ್ಟುಕೊಳ್ಳಿ.
- ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಜೀರಿಗೆ ಹಾಕಿ ಸಿಡಿಸಿ ನಂತರ ಹೆಚ್ಚಿದ ಟೊಮೆಟೊ ಹಾಗೂ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ.
- ಅದೇ ಬಾಣಲೆಗೆ ಬೇಯಿಸಿದ ತರಕಾರಿ ಹಾಗೂ ಕಾಳು ಹಾಕಿ ಗರಂ ಮಸಾಲೆ, ಮೆಣಸಿನಪುಡಿ, ಉಪ್ಪು ಹಾಕಿ ಕುದಿಸಿ. ಅದು ಚೆನ್ನಾಗಿ ಕುದ್ದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಆನಂತರ ಡ್ರೈಫ್ರೂಟ್ಸ್ ಗಳನ್ನು ಮಿಕ್ಸ್ ಮಾಡಿ. ಈಗ ರುಚಿಕರವಾದ ನವರತನ್ ಕುರ್ಮಾ ಸಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


