ಸಿಹಿ ಖರ್ಜೂರದ ವಡೆ
ಸಿಹಿ ಖರ್ಜೂರದ ವಡೆ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಧಗಳು
- ಖರ್ಜೂರ - 8-10
- ಸಿಪ್ಪೆ ತೆಗೆದ ಬಾದಾಮಿ - ಸ್ವಲ್ಪ
- ಗೋಧಿ ಹಿಟ್ಟು - 8 ಸ್ಪೂನ್
- ಸಕ್ಕರೆ - ಸ್ವಲ್ಪ
- ಹಾಲು - ಸ್ವಲ್ಪ
- ಏಲಕ್ಕಿಪುಡಿ - ಕಾಲು ಚಮಚ
- ಕೇಸರಿ - ಸ್ವಲ್ಪ
ಮಾಡುವ ವಿಧಾನ
- ಮೊದಲು ಖರ್ಜೂರದ ಬೀಜ ತೆಗೆದು, ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ, ಅದನ್ನು ಅರ್ಧಗಂಟೆ ಕಾಲ ನೆನೆಸಿಡಬೇಕು.
- ಆನಂತರ ಬಾದಾಮಿ, ಏಲಕ್ಕಿಪುಡಿ, ಕೇಸರಿಯೊಂದಿಗೆ ಅರೆದು ಗೋಧಿ ಹಿಟ್ಟಿನ ಜೊತೆ ಕಲಸಿ.
- ಈ ಹಿಟ್ಟಿನ ಮಿಶ್ರಣದಿಂದ ವಡೆ ತಟ್ಟಿ, ಕಾದ ಎಣ್ಣೆ ಅಥವಾ ತುಪ್ಪದ ಬಾಣಲೆಗೆ ಹಾಕಿ ಕೆಂಪಗಾಗುವಂತೆ ಕರೆದು ತೆಗೆಯಬೇಕು.
- ಸಕ್ಕರೆ ಪಾಕ ಮಾಡಿಕೊಂಡು ಅದಕ್ಕೆ ಏಲಕ್ಕಿಪುಡಿ ಸೇರಿಸಿರಬೇಕು.
- ಈ ಸಕ್ಕರೆ ಪಾಕಕ್ಕೆ ಎಣ್ಣೆಯಲ್ಲಿ ಕರೆದ ಖರ್ಜೂರದ ವಡೆಯನ್ನು ಅದ್ದಿ ತೆಗೆದರೆ ಸಿಹಿಸಿಹಿಯಾದ ಖರ್ಜೂರದ ವಡೆ ಸಿದ್ಧವಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


