ಬಿಸ್ಕೆಟ್ ರೊಟ್ಟಿ
ಬಿಸ್ಕೆಟ್ ರೊಟ್ಟಿ ಮಾಡುವ ವಿಧಾನ...
Published On :
ಬೇಕಾಗುವ ಪದಾರ್ಧಗಳು
- ಮೈದಾ ಹಿಟ್ಟು- 2.5 ಕಪ್
- ಸಣ್ಣ ರವೆ (ಬಾಂಬೆ ರವಾ) - 1/2 ಕಪ್
- ಹುರಿಗಡಲೆ ಪುಡಿ - 1 ಚಮಚ
- ತೆಂಗಿನಕಾಯಿ - 1/2 ಕಪ್
- ಕರಿಬೇವಿನ ಸೊಪ್ಪು - 15-20 ಎಲೆ
- ಶುಂಠಿ - ಸ್ವಲ್ಪ
- ಅರಿಶಿಣದ ಪುಡಿ - ಸ್ವಲ್ಪ
- ಮೆಣಸಿನ ಪುಡಿ - 1 ಚಮಚ
- ಸಾಸಿವೆ - 1/2 ಚಮಚ
- ಇಂಗು - 1/4 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ- ಸ್ವಲ್ಪ
ಮಾಡುವ ವಿಧಾನ
- ರವೆ ಮತ್ತು ಹುರಿಗಡಲೆಪುಡಿಯನ್ನು ತವಾದಲ್ಲಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಹಸಿಮೆಣಸು ಮತ್ತು ಕರಿಬೇವಿನ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು
- ಇನ್ನು ಒಂದು ಚಮಚದಷ್ಟು ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಂಡು ನಂತರ ಇದಕ್ಕೆ ಸಾಸಿವೆಯನ್ನು ಹಾಕಿ ಇದು ಸಿಡಿಯುತ್ತಿದ್ದಂತೆ ಶುಂಠಿ, ಹಸಿಮೆಣಸು, ಕರಿಬೇವಿನ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು.
- ತದನಂತರ ಇದಕ್ಕೆ ಇಂಗು, ಅರಿಶಿಣದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ತೆಂಗಿನ ಕಾಯಿಯನ್ನು ಈ ಮಿಶ್ರಣಕ್ಕೆ ಸೇರಿಸಿ, ಕಾಯಿ ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ ಮೆಣಸಿನ ಪುಡಿಯನ್ನು ಸೇರಿಸಿ.
- ಮೊದಲೇ ಹುರಿದಿಟ್ಟ ರವೆಗೆ ಈ ಮಿಶ್ರಣವನ್ನು ಸೇರಿಸಿ ಒಂದು ನಿಮಿಷ ಹಾಗೆಯೇ ಬಿಡಿ.
- ಮೈದಾ, ಎಣ್ಣೆ, ಉಪ್ಪು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಹಿಟ್ಟು ನಾದಿಕೊಳ್ಳಿ ಈ ಹಿಟ್ಟನ್ನು ನಾದಿ 15 ನಿಮಿಷಗಳ ಕಾಲ ಮುಚ್ಚಿಡಿ.
- 15 ನಿಮಿಷದ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ. ಇದನ್ನು ಪೂರಿ ಆಕಾರದಲ್ಲಿ ಬಿಸ್ಕೆಟ್ ರೊಟ್ಟಿಯನ್ನು ಎಣ್ಣೆಗೆ ಹಾಕಿ. ಎರಡೂ ಬದಿ ಇದನ್ನು ಚೆನ್ನಾಗಿ ಸುಡಬೇಕು.
- ನಂತರ ಚಿನ್ನದ ಬಣ್ಣಕ್ಕೆ ತಿರುಗಿರುವ ಬಿಸ್ಕೆಟ್ ರೊಟ್ಟಿಯನ್ನು ಬಾಣಲೆಯಿಂದ ತೆಗೆದು ತಟ್ಟೆಗೆ ಹಾಕಬೇಕು. ಈಗ ಸ್ವಾಧಿಷ್ಟಕರ ಬಿಸ್ಕೆಟ್ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

