ಗರಂ ಗರಂ ದೋಸೆ
ಗರಂ ಗರಂ ದೋಸೆ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಅಕ್ಕಿ – 2 ಬಟ್ಟಲು
- ಹುರಿಗಡಲೆ ಹಿಟ್ಟು – 1 ಬಟ್ಟಲು
- ಗೋಧಿ ಹಿಟ್ಟು – 2 ಬಟ್ಟಲು
- ಮೊಸರು – 3 ಬಟ್ಟಲು
- ಅಡುಗೆ ಸೋಡ – 1 ಚಿಟಿಕೆ
- ತುಪ್ಪ/ಎಣ್ಣೆ – ಬೇಕಾದಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಉಪ್ಪು ಬಿಟ್ಟು ಮಿಕ್ಕೆಲ್ಲಾ ಸಾಮಾನುಗಳನ್ನು ಮೊಸರಿನಲ್ಲಿ ಕಲಸಿ ಹದವಾಗಿ ದೋಸೆಯ ಹಿಟ್ಟಿನಂತೆ ಕಲಸಿಕೊಳ್ಳಬೇಕು.
- ನಂತರ ಅಗತ್ಯವಾದಷ್ಟು ನೀರು ಬೆರೆಸಿಕೊಳ್ಳಬೇಕು.
- ಕಲಸಿದ ಸುಮಾರು ಹನ್ನೆರಡು ಗಂಟೆಗಳ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿರಿ.
- ಈಗ ಕಾವಲಿಯನ್ನು ಕಾಯಲು ಒಲೆಯ ಮೇಲೆ ಇಡಿ. ನಂತರ ಕಾವಲಿಗೆ ತುಪ್ಪ ಅಥವಾ ಎಣ್ಣೆ ಹಾಕಿ ದೋಕಿ ಹಾಕಿರಿ.
- ದೋಸೆಯನ್ನು ಎರಡೂ ಭಾಗಗಳಲ್ಲೂ ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಸುಡಬೇಕು. ಈಗ ರುಚಿಕರ ಗರಂಗರಂ ದೋಸೆ ತಿನ್ನಲು ಸಿದ್ಧ. ಕಾಯಿಚಟ್ನಿಯೊಂದಿಗೆ ತಿಂದರೆ ಬಲು ರುಚಿ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


