ಸ್ವೀಟ್ ಪೊಟಾಟೋ ಕ್ರೌನ್ಸ್
ಸ್ವೀಟ್ ಪೊಟಾಟೋ ಕ್ರೌನ್ಸ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಸಿಹಿಗೆಣಸು - 2
- ಬ್ರೌನ್ ಶುಗರ್ - 1/4 ಕಪ್
- ಪೀಕಾನ್ಸ್ - 1 ಕಪ್
- ಲವಂಗ - 2
- ಬೆಣ್ಣೆ - 1 ಚಮಚ
- ಎಣ್ಣೆ - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಮೊದಲು ಓವನನ್ನು 400ಫೆ ಪ್ರೀಹೀಟ್ ಮಾಡಿ. ನಂತರ ಗೆಣಸನ್ನು 1/2 ಇಂಚು ದಪ್ಪ ಇರುವಂತೆ ಕತ್ತರಿಸಿಕೊಳ್ಳಿ.
- ಒಂದು ಬೌಲ್ ಗೆ ಎಣ್ಣೆ ಹಾಕಿ, ನಂತರ ಗೆಣಸಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ. ಮತ್ತೆ ಸಣ್ಣ ಬೌಲ್ ನಲ್ಲಿ ಬ್ರೌನ್ ಶುಗರ್, ಪೀಕಾನ್ಸ್, ಬೆಣ್ಣೆ, ಲವಂಗ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ.
- ನಂತರ ಎಣ್ಣೆ ಉಪ್ಪು ಮಿಶ್ರಿತ ಗೆಣಸನ್ನು ಬೇಕಿಂಗ್ ಟ್ರೇನಲ್ಲಿಟ್ಟು 25-30 ನಿಮಿಷ ಬೇಯಿಸಿ.
- ನಂತರ ಅದನ್ನು ತೆಗೆದು ಸ್ವಲ್ಪ ಆರಿದ ಮೇಲೆ ಅದರ ಮೇಲೆ ಸಿದ್ಧಪಡಿಸಿರುವ ಬ್ರೌನ್ ಶುಗರ್ ಮಿಶ್ರಣವನ್ನು ಹರಡಿ ಮತ್ತೆ ಓವನ್ ನಲ್ಲಿಟ್ಟು ಸಕ್ಕರೆ ಕರಗುವವರೆಗೆ 10 ನಿಮಿಷ ಬೇಯಿಸಿ ಸ್ವೀಟ್ ಈಗ ಪೊಟಾಟೋ ಕ್ರೌನ್ ತಿನ್ನಲು ಸಿದ್ಧವಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


