ವಿಶ್ವಕಪ್ ಫುಟ್ಬಾಲ್: ಪೊಲ್ಯಾಂಡ್ ವಿರುದ್ಧ ಜಪಾನ್ ಪರಾಭವ
ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗುರುವಾರ ನಡೆದ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಪೊಲ್ಯಾಂಡ್ ಜಯ ಸಾಧಿಸಿದೆ.

Published On :
ವೊಲ್ಗೋಗ್ರಾಡ್ ಅರೇನಾ (ರಷ್ಯಾ): ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗುರುವಾರ ನಡೆದ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಪೊಲ್ಯಾಂಡ್ ಜಯ ಸಾಧಿಸಿದೆ.
ಪೋಲ್ಯಾಂಡ್ 0-1 ಅಂತರದ ಗೆಲುವು ಸಾಧಿಸಿದ್ದರೂ ಅಂಕಪಟ್ಟಿಯ ಆಧಾರದಲ್ಲಿ ಜಪಾನ್ ತಂಡ ಮುಂದಿನ ಹಂತಕ್ಕೆ ಪ್ರವೇಶಿಸುವುದಕ್ಕೆ ಯಶಸ್ವಿಯಾಗಿದೆ,.
ಪೋಲ್ಯಾಂಡ್ ನ ಜೇನ್ ಬೆಡ್ನಾರೆಕ್ ಪಂದ್ಯದ ದ್ವಿತೀಯಾರ್ಧದಲ್ಲಿ ಗೋಲು ಗಳಿಸಿಕೊಳ್ಳುವ ಮುಖೇನ ಪೊಲ್ಯಾಂಡ್ ತಂಡದ ವಿಜಯಕ್ಕೆ ಕಾರಣವಾಗಿದ್ದಾರೆ. ಅವರು ಪಂದ್ಯದ 59ನೇ ನಿಮಿಷದಲ್ಲಿ ಗೋಲು ಬಾರಿಸಿ ಈ ಸಾಧನೆ ಮಾಡಿದರು.
ಪಂದ್ಯದ ನಡುವೆ 66ನೇ ನಿಮಿಷದಲ್ಲಿ ಜಪಾನ್ ನ ತೋಮೋಆಕಿ ಮಕಿನೋ ವಿರುದ್ಧ ಹಳದಿ ಕಾರ್ಡ್ ಪ್ರದರ್ಶಿಸಲಾಗಿತ್ತು. ಇತ್ತಂಡಗಳು ಪಂದ್ಯದ ನಡುವೆ ಐದು ಬಾರಿ ತಮ್ಮ ಆಟಗಾರರನ್ನು ಬದಲಿಸಿಕೊಂಡಿದ್ದವು.
ಎರಡೂ ತಂಡಗಳು ಗೋಲು ಗಳಿಕೆಗಾಗಿ ಸಮಬಲದ ಹೋರಾಟ ನಡೆಸಿದ್ದರೂ ಸಹ ಜಪಾನ್ ಕಡೆಗೂ ಗೋಲು ಗಳಿಕೆ ಮಾಡುವಲ್ಲಿ ವಿಫಲವಾಗಿ ಸೋಲನುಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


