ಅಬ್ಬಾ.. ಅಪನ್ನನ್ನೇ ಮೀರಿಸುವಂತಿದ್ದಾನೆ ಜೂನಿಯರ್ ರೊನಾಲ್ಡೋ!
ಸಾಮಾನ್ಯವಾಗಿ ಖ್ಯಾತನಾಮ ಕ್ರೀಡಾಪಟುಗಳಿಗೆ ದೊರೆತ ಕೀರ್ತಿ ಅವರ ಮಕ್ಕಳಿಗೆ ಸಿಗುವುದಿಲ್ಲ. ಇದಕ್ಕೆ ಸಾಕಷ್ಟು ಖ್ಯಾತನಾಮ ಕ್ರೀಡಾಪಟುಗಳು ಮತ್ತು ಅವರ ಮಕ್ಕಳು ಉದಾಹರಣೆಯಂತಿದೆ.

Published On :
ಮಾಸ್ಕೋ: ಸಾಮಾನ್ಯವಾಗಿ ಖ್ಯಾತನಾಮ ಕ್ರೀಡಾಪಟುಗಳಿಗೆ ದೊರೆತ ಕೀರ್ತಿ ಅವರ ಮಕ್ಕಳಿಗೆ ಸಿಗುವುದಿಲ್ಲ. ಇದಕ್ಕೆ ಸಾಕಷ್ಟು ಖ್ಯಾತನಾಮ ಕ್ರೀಡಾಪಟುಗಳು ಮತ್ತು ಅವರ ಮಕ್ಕಳು ಉದಾಹರಣೆಯಂತಿದೆ.
ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮಗ ಮಾತ್ರ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾನೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ರೊನಾಲ್ಡೋ ಪುತ್ರ ಕ್ರಿಸ್ಟಿಯಾನೋ ರೊನಾಲ್ಡೋ ಸ್ಯಾಂಟೋಸ್ ಕೂಡ ಭಾಗಿಯಾಗಿದ್ದ. ಪೋರ್ಚುಗಲ್ ತಂಡದ ಪಂದ್ಯಕ್ಕೂ ಮುನ್ನ ತಮ್ಮ ತಂದೆ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ತಾನೂ ಕೂಡ ಮೈದಾನಕ್ಕೆ ಇಳಿದ ಜೂನಿಯರ್ ರೊನಾಲ್ಡೋ ಇತರೆ ಪುಟ್ಟಮಕ್ಕಳೊಂದಿಗೆ ಆಟವಾಡಿದ್ದಾನೆ.
ಈ ವೇಳೆ ಮಗನ ಚಾಕಚಕ್ಯತೆ, ಟೈಮಿಂಗ್ ಮತ್ತು ಫುಟ್ ವರ್ಕ್ ಕಂಡ ರೊನಾಲ್ಡೋ ಖುಷಿಯಾಗಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಪ್ಪನ ಹಾದಿಯಲ್ಲೇ ಸಾಗುತ್ತಿರುವ ಜೂನಿಯರ್ ರೊನಾಲ್ಡೋಗೂ ಅದೇ ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಫುಟ್ಬಾಲ್Cristiano RonaldoMoscowಮಾಸ್ಕೋFIFA World cup 2018ಕ್ರಿಸ್ಟಿಯಾನೋ ರೊನಾಲ್ಡೋOffbeatPortugalಪೋರ್ಚುಗಲ್ಫೀಫಾ ವಿಶ್ವಕಪ್ 2018Ronaldo Jrಜೂನಿಯರ್ ರೊನಾಲ್ಡೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


