ವಿಶ್ವಕಪ್ ಫುಟ್ಬಾಲ್: ಟುನೇಷಿಯಾ ವಿರುದ್ಧ ಬೆಲ್ಜಿಯಂಗೆ ಜಯ, ರೊನಾಲ್ಡೋ ಜತೆ ಅಗ್ರ ಸ್ಥಾನ ಹಂಚಿಕೊಂಡ ಲ್ಯುಕಾಕು
ಕ್ರಿಸ್ಟಿಯಾನೊ ರೋನಾಲ್ಡೋ ಗೊಲು ಗಳಿಕೆಯ ಕಾರಣದಿಂದ ವಿಶ್ವಕಪ್ ಗೋಲುರಕ್ಷಣೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 16 ಸುತ್ತಿನ ಪಂದ್ಯದಲ್ಲಿ ಟುನಿಷಿಯಾ ವಿರುದ್ಧ ಬೆಲ್ಜಿಯಂ 5-2 .....

Published On :
ಮಾಸ್ಕೋ: ಕ್ರಿಸ್ಟಿಯಾನೊ ರೋನಾಲ್ಡೋ ಗೊಲು ಗಳಿಕೆಯ ಕಾರಣದಿಂದ ವಿಶ್ವಕಪ್ ಗೋಲುರಕ್ಷಣೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 16 ಸುತ್ತಿನ ಪಂದ್ಯದಲ್ಲಿ ಟುನಿಷಿಯಾ ವಿರುದ್ಧ ಬೆಲ್ಜಿಯಂ 5-2 ಗೋಲುಗಳ ಜಯ ದಾಖಲಿಸಿದ ಬಳಿಕ ಈ ಪಟ್ಟಿಯಲ್ಲಿ ರೊನಾಲ್ಡೋ ಜತೆಗೆ ರೊಮೆಲು ಲ್ಯುಕಾಕು ಸಹ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ 6ನೇ ನಿಮಿಷದಿಂದ 90 ನಿಮಿಷಗಳ ಅಂತರದಲ್ಲಿ ಬೆಲ್ಜಿಯಂ ಒಟ್ಟಾರೆ ಐದು ಗೋಲು ಗಳಿಸಿ ಪಾರಮ್ಯ ಮೆರೆಯಿತು.
ರೊಮೆಲು ಲ್ಯುಕಾಕು ಮತ್ತು ಹಜಾರ್ಡ್ ಬೆಲ್ಜಿಯಂ ಪರ ತಲಾ ಎರಡು ಗೊಲು ಗಳಿಸಿದರೆ ತಂಡದ ಇನ್ನೋರ್ವ ಆಟಗಾರ ಮಿಕ್ಕಿ ಬೆಶುವಾಯಿ ಒಂದು ಗೋಲು ದಾಖಲಿಸಿದ್ದಾರೆ.
ಟುನೇಷಿಯಾ ಪರವಾಗಿ ಡೈಲನ್ ಬ್ರಾನ್ ಮತ್ತು ವಹೀಬಿ ಖಜ್ರಿ ಒಂದೊಂದು ಗೋಲು ಗಳಿಸಿಕೊಟ್ಟರು
ರೋಚಕ ಹಣಾಹಣಿಯಲ್ಲಿ ಬೆಲ್ಜಿಯಂ ಭರ್ಜತಿ ಜಯ ದಾಖಲಿಸಿದ್ದು ಭಾನುವಾರ ನಡೆವ ಪಂದ್ಯದಲ್ಲಿ ತಂಡವು ಪನಾಮಾವನ್ನು ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Belgiumಬೆಲ್ಜಿಯಂFIFA World cup 2018ಫಿಫಾ ವಿಶ್ವಕಪ್ 2018Romelu LukakuEden Hazardರೊಮೆಲು ಲ್ಯುಕಾಕುಈಡನ್ ಹಜಾರ್ಡ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


