ಫೀಫಾ ವಿಶ್ವ ಕಪ್ 2018

ವಿಶ್ವಕಪ್ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾದ ಯುವತಿಯರಿಗೆ ಲೈಫ್ ಟೈಮ್ ಬರ್ಗರ್ ಉಚಿತ!

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿ ರಂಗೇರುತ್ತಿರುವಂತೆಯೇ ಇತ್ತ ಬರ್ಗರ್ ಸಂಸ್ಥೆಯೊಂದು ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾಗುವ ಯುವತಿ ಅಥವಾ ಮಹಿಳೆಯರಿಗೆ ಜೀವನ ಪರ್ಯಂತ ಉಚಿತ ಬರ್ಗರ್ ನೀಡುವುದಾಗಿ ಘೋಷಣೆ ಮಾಡಿ ವಿವಾದಕ್ಕೆ ಸಿಲುಕಿದೆ.

ವಿಶ್ವಕಪ್ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾದ ಯುವತಿಯರಿಗೆ ಲೈಫ್ ಟೈಮ್ ಬರ್ಗರ್ ಉಚಿತ!
ಸಂಗ್ರಹ ಚಿತ್ರ
Published On :
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿ ರಂಗೇರುತ್ತಿರುವಂತೆಯೇ ಇತ್ತ ಬರ್ಗರ್ ಸಂಸ್ಥೆಯೊಂದು ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾಗುವ ಯುವತಿ ಅಥವಾ ಮಹಿಳೆಯರಿಗೆ ಜೀವನ ಪರ್ಯಂತ ಉಚಿತ ಬರ್ಗರ್ ನೀಡುವುದಾಗಿ ಘೋಷಣೆ ಮಾಡಿ ವಿವಾದಕ್ಕೆ ಸಿಲುಕಿದೆ.
ಜಗತ್ತಿನ ಅತ್ಯಂತ ಖ್ಯಾತ ಕ್ರೀಡೆಗಳಲ್ಲಿ ಫುಟ್ಬಾಲ್ ಕೂಡ ಒಂದು...ಫುಟ್ಬಾಲ್ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು, ಫುಟ್ಬಾಲ್ ಗಾಗಿ ಅಭಿಮಾನಿಗಳು ಮಾಡುವ ಹುಚ್ಚುತನಕ್ಕೆ ಕೊನೆಯೇ ಇಲ್ಲ. ಇನ್ನು ಇಂತಹುದೇ ಒಂದು ಘಟನೆ ಇದೀರ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ವೇಳೆ ನಡೆದಿದ್ದು, ಅಂತಾರಾಷ್ಟ್ರೀಯ ಬರ್ಗರ್ ತಯಾರಿಕಾ ಸಂಸ್ಥೆಯೊಂದು ಅಭಿಮಾನಿಗಳಿಗೆ ವಿಚಿತ್ರ ಆಫರ್ ವೊಂದನ್ನು ನೀಡಿದೆ. ಅದೇನೆಂದರೆ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ದೊಂಡಿರುವ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯರಾಗುವ ಯುವತಿಯರಿಗೆ ತಾನು ಜೀವನ ಪರ್ಯಂತ ಬರ್ಗರ್ ಅನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಣೆ ಮಾಡಿದೆ.
Story image
ಹೌದು...ಖ್ಯಾತ ಬರ್ಗರ್ ತಯಾರಿಕಾ ದೈತ್ಯ ಸಂಸ್ಥೆ ಬರ್ಗರ್ ಕಿಂಗ್ ಇಂತಹುದೊಂದು ಆಫರ್ ನೀಡಿದ್ದು, ಹಾಲಿ ಫೀಫಾ ವಿಶ್ವಕಪ್ ನಲ್ಲಿ ಪಾಲ್ಗೊಂಡಿರುವ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯರಾಗುವ ಯುವತಿ ಅಥವಾ ಮಹಿಳೆಯರಿಗೆ ತಾನು ಜೀವನ ಪರ್ಯಂತ ಉಚಿತ ಬರ್ಗರ್ ನೀಡುವುದಾಗಿ ಘೋಷಣೆ ಮಾಡಿದೆ. 
ತನ್ನ ಟ್ವಿಟರ್ ಖಾತೆಯಲ್ಲಿ ಬರ್ಗರ್ ಕಿಂಗ್ ಈ ಬಗ್ಗೆ ಘೋಷಣೆ ಮಾಡಿದ್ದು, ಬರ್ಗರ್ ಕಿಂಗ್ ನ ಈ ಆಫರ್ ಇದೀಗ ರಷ್ಯಾದಲ್ಲಿ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.