ನಾನೇ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ: ಬ್ರೆಜಿಲ್ ಆಟಗಾರ ನೈಮರ್
ಬ್ರೆಜಿಲ್ ನ ಫುಟ್ಬಾಲ್ ಆಟಗಾರ ನೈಮರ್ ತಾನೇ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ...

Published On :
ಬ್ರೆಜಿಲ್ ನ ಫುಟ್ಬಾಲ್ ಆಟಗಾರ ನೈಮರ್ ತಾನೇ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
ಬ್ರೆಜಿಲ್ ರಾಷ್ಟ್ರೀಯ ತಂಡದ ಫಾರ್ ವರ್ಡ್ ಆಟಗಾರನಾಗಿರುವ ನೈಮರ್ ನಾನೇ ಜಗತ್ತಿನ ಅತ್ಯುತ್ತಮ ಆಟಗಾರ. ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಮತ್ತು ಫೋರ್ಚುಗಲ್ ನ ರೊನಾಲ್ಡೋ ಬೇರೆ ಗ್ರಹದಿಂದ ಬಂದವರು. ಇವರಿಬ್ಬರೂ ಎಲ್ಲಾ ಆಟಗಾರರಿಗಿಂತಲೂ ಶ್ರೇಷ್ಠ ಸ್ಥಾನದಲ್ಲಿದ್ದಾರೆ ಎಂದು ಹೊಗಳಿದ್ದಾರೆ.
ತನಗಿಂತಲೂ ಮೆಸ್ಸಿ ಮತ್ತು ರೊನಾಲ್ಡೋ ಶ್ರೇಷ್ಠ ಆಟಗಾರರು ಎಂದು ಹೇಳುವ ಮೂಲಕ ನೈಮರ್ ಕ್ರೀಡಾಪ್ರೇಮಿಗಳ ಮನಗೆದ್ದಿದ್ದಾರೆ.
ನಾನು ವಿಶ್ವದ ಶ್ರೇಷ್ಠ ಆಟಗಾರನಾಗಬೇಕಾಗಿಲ್ಲ. ಆದರೆ ನಾನು ಈ ಬಾರಿಯ ಫಿಫಾ ವಿಶ್ವಕಪ್ ಗೆಲ್ಲಬೇಕಾಗಿದೆ. ಇದರಿಂದ ಬಹುಕಾಲದ ಕನಸು ಈಡೇರುತ್ತದೆ ಎಂದು ಹೇಳಿದ್ದಾರೆ.
26 ವರ್ಷದ ನೈಮರ್ ಈ ಬಾರಿಯ ಫುಟ್ಬಾಲ್ ವಿಶ್ವಕಪ್ ನ ಜನಪ್ರಿಯ ತಾರೆಯರಲ್ಲಿ ಒಬ್ಬರಾಗಿದ್ದು ಟೂರ್ನಿಯ ಗೋಲ್ಡನ್ ಬೂಟ್ ನ ಸ್ಪರ್ಧಿಯೂ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಫುಟ್ಬಾಲ್Brazilರಷ್ಯಾRussiaFIFA World Cupಫಿಫಾ ವಿಶ್ವಕಪ್FIFAಫಿಫಾಬ್ರೆಜಿಲ್FIFA World cup 2018Neymarಫಿಫಾ ವಿಶ್ವಕಪ್ 2018ನೈಮರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


