ಫಿಫಾ ಫುಟ್ ಬಾಲ್ ವಿಶ್ವಕಪ್ ಟೂರ್ನಿ ಚಾಲನೆಗೆ ಕ್ಷಣಗಣನೆ: ಗೂಗಲ್ ನಿಂದ ವಿಶೇಷ ಡೂಡಲ್
ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 21ನೇ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿ ಚಾಲನೆಗೆಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಗೌರವ ನೀಡಿದೆ.

Published On :
ಮಾಸ್ಕೋ: ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 21ನೇ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿ ಚಾಲನೆಗೆಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಗೌರವ ನೀಡಿದೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 32 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಇಂದು ರಾತ್ರಿ ಟೂರ್ನಿಗೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಟೂರ್ನಿ ಉದ್ಘಾಟನೆಗೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿರುವ 32 ರಾಷ್ಟ್ರಗಳ ತಂಡಗಳ ಸಂಸ್ಕೃತಿಯನ್ನು ಬಿಂಬಿಸಲು ಗೂಗಲ್ ನಿರ್ಧರಿಸಿದೆ. ಇದಕ್ಕೆ ಆಯಾ ರಾಷ್ಟ್ರಗಳ ಕಲಾವಿದರು ಕೈಜೋಡಿಸಲಿದ್ದಾರೆ ಎಂದು ತಿಳಿಸಿದೆ. ಇನ್ನು ಈ ಡೂಡಲ್ ಗ್ಲೂಕಿಟ್ ಅವರ ಕೈ ಚಳಕದಲ್ಲಿ ಮೂಡಿ ಬಂದಿದೆ.
ಟೂರ್ನಿಯ ಪಂದ್ಯಗಳು ರಷ್ಯಾದ ಮಾಸ್ಕೋ, ಕಜನ್, ಸಮರ, ಸೇಂಟ್ ಪಿಟರ್ಸ್‌ಬರ್ಗ್ ಸೇರಿದಂತೆ ಒಟ್ಟು 16 ಕ್ರೀಡಾಂಗಣದಲ್ಲಿ ನಡೆಯಲಿವೆ.
32 ತಂಡಗಳ ಹಣಾಹಣಿ
32 ದೇಶಗಳ ತಂಡಗಳು ತಮ್ಮ ಪರಾಕ್ರಮವನ್ನು ಇಲ್ಲಿ ಒರೆಗೆ ಹಚ್ಚಲಿದ್ದು, ಕಳೆದ ಬಾರಿಯ ಚಾಂಪಿಯನ್ ಜರ್ಮನಿ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಹೋರಾಟಕ್ಕಿಳಿಯಲಿದೆ. ಆತಿಥೇಯ ತಂಡ ರಷ್ಯಾ ಕೂಡ ಹೆಜ್ಜೆ ಗುರುತು ಮೂಡಿಸಲು ಹಾತೋರೆಯುತ್ತಿದೆ. ಒಟ್ಟು ಏಳು ಬಾರಿ ಫೈನಲ್ ಪ್ರವೇಶಿಸಿದ ಮತ್ತು ಐದು ಬಾರಿಯ ಚಾಂಪಿಯನ್ ಆಗಿರುವ ಬ್ರೆಜಿಲ್, ಎಂಟು ಬಾರಿ ಫೈನಲ್‌ನಲ್ಲಿ ಆಡಿ ನಾಲ್ಕು ಸಲ ಪ್ರಶಸ್ತಿಗೆ ಮುತ್ತಿಕ್ಕಿದ ಜರ್ಮನಿ, ತಲಾ ಎರಡು ಬಾರಿ ಚಾಂಪಿಯನ್ ಆದ ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳ ಜೊತೆ ಒಂದೊಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿವೆ.
ನಾಲ್ಕು ಬಾರಿ ಚಾಂಪಿಯನ್ ಆದರೂ ಇಟಲಿಗಿಲ್ಲ ವಿಶ್ವಕಪ್ ಆಡುವ ಅರ್ಹತೆ
ಇನ್ನು ನಾಲ್ಕು ಪ್ರಶಸ್ತಿ ಗೆದ್ದು ಎರಡು ಬಾರಿ ರನ್ನರ್ ಅಪ್ ಆಗಿದ್ದ ಇಟಲಿ ಈ ಬಾರಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಗೂಗಲ್ ಡೂಡಲ್ರಷ್ಯಾಫುಟ್ ಬಾಲ್MoscowFIFA World cup 2018Google doodleOffbeatಫಿಫಾ ವಿಶ್ವಕಪ್ 2018Russia. ಮಾಸ್ಕೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


