ಫೀಫಾ ವಿಶ್ವ ಕಪ್ 2018

ಪುಟೀನ್ ಎದುರೇ ಫಿಫಾ ವಿಶ್ವಕಪ್ ವಿಜೇತರಿಗೆ ನೀಡಲಾಗುತ್ತಿದ್ದ ಚಿನ್ನದ ಪದಕವನ್ನೇ ಎಗರಿಸಿದ ಮಹಿಳೆ!

ಫ್ರಾನ್ಸ್ 2018ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಫ್ರಾನ್ಸ್ ತಂಡದ ಆಟಗಾರರಿಗೆ ಚಿನ್ನದ ಪದಕವನ್ನು ನೀಡಿ ಸಮ್ಮಾನಿಸುತ್ತಿದ್ದ ವೇಳೆ...

ಪುಟೀನ್ ಎದುರೇ ಫಿಫಾ ವಿಶ್ವಕಪ್ ವಿಜೇತರಿಗೆ ನೀಡಲಾಗುತ್ತಿದ್ದ ಚಿನ್ನದ ಪದಕವನ್ನೇ ಎಗರಿಸಿದ ಮಹಿಳೆ!
ಸಂಗ್ರಹ ಚಿತ್ರ
Published On :
ಮಾಸ್ಕೋ(ರಷ್ಯಾ): ಫ್ರಾನ್ಸ್ 2018ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಫ್ರಾನ್ಸ್ ತಂಡದ ಆಟಗಾರರಿಗೆ ಚಿನ್ನದ ಪದಕವನ್ನು ನೀಡಿ ಸಮ್ಮಾನಿಸುತ್ತಿದ್ದ ವೇಳೆ ಒಂದು ಚಿನ್ನದ ಪದಕವನ್ನು ಮಹಿಳೆಯೊಬ್ಬರು ಎಗರಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟೀನ್ ಪಕ್ಕದಲ್ಲೇ ನಿಂತಿದ್ದ ಮಹಿಳೆಯೋರ್ವಳು ಆಟಗಾರರಿಗೆ ಚಿನ್ನದ ಪದಕವನ್ನು ಪ್ರಧಾನ ಮಾಡಲಾಗುತ್ತಿದ್ದ ವೇಳೆ ಒಂದು ಚಿನ್ನದ ಪದಕವನ್ನು ಎಗರಿಸಿ ತಾನು ಧರಿಸಿದ್ದ ಕೋಟ್ ನ ಜೇಬಿನೊಳಗೆ ಹಾಕಿಕೊಳ್ಳುತ್ತಿರುವುದನ್ನು ಗಮನಿಸಿದ ವ್ಯಕ್ತಿಯೋರ್ವ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಟ್ವೀಟರಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. 
ಪುಟೀನ್ ಎದುರೇ ಚಿನ್ನದ ಪದಕವನ್ನು ಎಗರಿಸಿದ್ದ ಮಹಿಳೆಗೆ ಎಷ್ಟು ಧೈರ್ಯವಿರಬೇಕು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. 
ಇನ್ನು ಮತ್ತೊಬ್ಬರು ಒಂದು ಚಿನ್ನದ ಪದಕ ಹೆಚ್ಚಾಗಿತ್ತೇನೋ ಅದಕ್ಕೆ ಆ ಪದಕವನ್ನು ಮಹಿಳೆ ಜೋಪಾನ ಮಾಡುತ್ತಿದ್ದಾಳೆ ಎಂದು ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.