ಫುಟ್ಬಾಲ್ ಅಭಿಮಾನಿಗಳಿಗೆ ರಷ್ಯಾ ಅಧ್ಯಕ್ಷರಿಂದ ಸಿಹಿ ಸುದ್ದಿ, ಒಂದು ವರ್ಷ ವೀಸಾ ಫ್ರೀ!
ಯಶಸ್ವೀ ಫುಟ್ಬಾಲ್ ವಿಶ್ವಕಪ್ ಟೂರ್ನಿ ಆಯೋಜನೆ ಮಾಡಿ ಸೈ ಎನಿಸಿಕೊಂಡ ರಷ್ಯಾ ಈಗ ಆದೇ ಖುಷಿಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಘೋಷಿಸಿದೆ.

Published On :
ಮಾಸ್ಕೋ: ಯಶಸ್ವೀ ಫುಟ್ಬಾಲ್ ವಿಶ್ವಕಪ್ ಟೂರ್ನಿ ಆಯೋಜನೆ ಮಾಡಿ ಸೈ ಎನಿಸಿಕೊಂಡ ರಷ್ಯಾ ಈಗ ಆದೇ ಖುಷಿಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಘೋಷಿಸಿದೆ.
ರಷ್ಯಾದಲ್ಲಿ ನಡೆದ ಫೀಫಾ ವಿಶ್ವಕಪ್ ಟೂರ್ನಿ ಯಶಸ್ವಿ ಆಯೋಜನೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫುಟ್ಬಾಲ್ ಅಭಿಮಾನಿಗಳ ವೀಸಾ ನಿಯಮವನ್ನು ಸಡಿಲ ಮಾಡಿದ್ದು, ಫುಟ್ಬಾಲ್ ಅಭಿಮಾನಿಗಳಿಗೆ ಉಚಿತವಾಗಿ ರಷ್ಯಾ ಪ್ರವೇಶಕ್ಕೆ ವೀಸಾ ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪುಟಿನ್ ಅವರು, ಅತ್ಯಂತ ಯಶಸ್ವೀ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದಕ್ಕಾಗಿ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಫೀಫಾ ಸಂಸ್ಥೆ ನಮ್ಮ ಮೇಲಿಟ್ಟಿದ್ದ ಭರವಸೆನ್ನು ಉಳಿಸಿಕೊಂಡಿದ್ದೇವೆ. ರಷ್ಯಾದ ಮತ್ತು ವಿಶ್ವಾದ್ಯಂತ ಇರುವ ಕ್ರೀಡಾಭಿಮಾನಿಗಳಿಗಾಗಿ ನಾವು ಇದನ್ನು ಮಾಡಿದ್ದು, ಟೂರ್ನಮೆಂಟ್ ಗಾಗಿ ರಷ್ಯಾಗೆ ಆಗಮಿಸಿದ ವಿದೇಶಿ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಪುಟಿನ್ ಹೇಳಿದ್ದಾರೆ.
ವಿದೇಶಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್
ಇನ್ನು ರಷ್ಯಾ ಅಧ್ಯಕ್ಷ ಪುಟಿನ್ ಫುಟ್ಬಾಲ್ ಅಭಿಮಾನಿಗಳಿಗೆ ವೀಸಾ ಉಚಿತ ಘೋಷಣೆ ಮಾಡಿದ್ದು, ಅಭಿಮಾನಿಗಳ ಗುರುತಿನ ಚೀಟಿ ಹೊಂದಿರುವ ವಿದೇಶಿ ಫುಟ್ಬಾಲ್ ಪ್ರೇಮಿಗಳು ಇನ್ನು ಮುಂದೆ ಒಂದು ವರ್ಷಗಳ ಕಾಲ ಉಚಿತವಾಗಿ ರಷ್ಯಾ ಪ್ರವೇಶಿಸಲು ವೀಸಾ ಪಡೆಯಬಹುದು ಎಂದು ಪುಟಿನ್ ಘೋಷಣೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಫೈನಲ್Russiaಫ್ರಾನ್ಸ್Moscowಮಾಸ್ಕೋFIFA World cup 2018ಫೀಫಾ ವಿಶ್ವಕಪ್ 2018ಕ್ರೊವೇಷಿಯಾFIFA Original Trophyಫೀಫಾ ಅಸಲಿ ಟ್ರೋಫಿPresident Putin Finalರಷ್ಯಾ. ಪುಟಿನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


