ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ಹೊರಬಿದ್ಜ ಬೆನ್ನಲ್ಲೇ, ನಿವೃತ್ತಿ ಘೋಷಿಸಿದ ದಾಖಲೆ ವೀರ ಸೆರ್ಗೆಯ್ ಇಗ್ನಶೆವಿಚ್

ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಅಭೂತಪೂರ್ವ ಸಾಧನೆ ತೋರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಕ್ರೊವೇಷಿಯಾಗೆ ಮಣಿದು ಟೂರ್ನಿಯಿಂದ ರಷ್ಯಾ ತಂಡ ಹೊರಬಿದ್ದ ಬೆನ್ನಲ್ಲೇ ತಂಡದ ದಾಖಲೆ ವೀರ ಸೆರ್ಗೆಯ್ ಇಗ್ನಶೆವಿಚ್ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ಹೊರಬಿದ್ಜ ಬೆನ್ನಲ್ಲೇ, ನಿವೃತ್ತಿ ಘೋಷಿಸಿದ ದಾಖಲೆ ವೀರ ಸೆರ್ಗೆಯ್ ಇಗ್ನಶೆವಿಚ್
ಸಂಗ್ರಹ ಚಿತ್ರ
Published On :
ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಅಭೂತಪೂರ್ವ ಸಾಧನೆ ತೋರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಕ್ರೊವೇಷಿಯಾಗೆ ಮಣಿದು ಟೂರ್ನಿಯಿಂದ ರಷ್ಯಾ ತಂಡ ಹೊರಬಿದ್ದ ಬೆನ್ನಲ್ಲೇ ತಂಡದ ದಾಖಲೆ ವೀರ ಸೆರ್ಗೆಯ್ ಇಗ್ನಶೆವಿಚ್ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸೆರ್ಗೆಯ್ ಇಗ್ನಶೆವಿಚ್, ವಿಶ್ವಕಪ್ ಟೂರ್ನಿ ಇಲ್ಲದೇ ಹೋಗಿದ್ದರೆ ಮೊದಲೇ ನಿವೃತ್ತಿ ಘೋಷಿಸುತ್ತಿದ್ದೆ. ಆದರೆ ವಿಶ್ವಕಪ್ ನಂತಹ ಪ್ರಮುಖ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಇದೀಗ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದು ನನ್ನ ಕೊನೆಯ ವಿಶ್ವಕಪ್ ಟೂರ್ನಿಯಾಗಿದ್ದು, ಇಡೀ ಟೂರ್ನಿ ನನಗೆ ಹೊಸ ಚೈತನ್ಯ ನೀಡಿದೆ. ಅತ್ಯುತ್ತಮ ಪ್ರದರ್ಶನದೊಂದಿಗೆ ನಿವೃತ್ತಿ ಘೋಷಣೆ ಮಾಡುತ್ತಿರುವುದು ಹರ್ಷ ತಂದಿದೆ. ಟೂರ್ನಿಯಲ್ಲಿ ಅತ್ಯುತ್ತಮ ತಂಡದೊಂದಿಗೆ ಆಟವಾಡಿದ ಖುಷಿ ಇದೆ ಎಂದು ಸೆರ್ಗೆಯ್ ಇಗ್ನಶೆವಿಚ್ ಹೇಳಿದ್ದಾರೆ.
ಫೀಫಾ ಮೂಲಗಳ ಪ್ರಕಾರ ಸೆರ್ಗೆಯ್ ಇಗ್ನಶೆವಿಚ್ ರಷ್ಯಾ ಪರ ಅತೀ ಹೆಚ್ಚು ಅಂದರೆ 127 ಗೋಲು ಗಳಿಸಿದ್ದಾರೆ. ಅಂತೆಯೇ ಟೂರ್ನಿಯೊಂದರಲ್ಲಿ ಸೆರ್ಗೆಯ್ ಇಗ್ನಶೆವಿಚ್ ಗರಿಷ್ಟ 9 ಗೋಲು ಗಳಿಸಿದ್ದಾರೆ. ಇದು ರಷ್ಯಾ ಆಟಗಾರರಲ್ಲೇ ಆಟಗಾರನ ವೈಯಕ್ತಿಕ ಗರಿಷ್ಠ ದಾಖಲೆಯಾಗಿದೆ. 2005ರಲ್ಲಿ ಯುಇಎಫ್ಎ ಟೂರ್ನಿ ವೇಳೆ ಸೆರ್ಗೆಯ್ ಇಗ್ನಶೆವಿಚ್ ರಷ್ಯಾ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.