ಯುಪಿಯಲ್ಲಿ ಮಹಾಘಟಬಂಧನಕ್ಕೆ ಬಿಗ್ ಶಾಕ್; ಮೂರೇ ದಿನಕ್ಕೆ ಹೊರಬಿದ್ದ ನಿಷಾದ್ ಪಾರ್ಟಿ!
ಉತ್ತರಪ್ರದೇಶದಲ್ಲಿ ಮಹಾಘಟಬಂಧನ ರಚನೆ ಮೂಲಕ ಪ್ರಧಾನಿ ಮೋದಿಗೆ ತೀವ್ರ ಪೈಪೋಟಿ ನೀಡುವ ಯೋಜನೆಯಲ್ಲಿದ್ದ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮಹಾಘಟಬಂಧನಕ್ಕೆ ದೊಡ್ಡ ಶಾಕ್ ಎದುರಾಗಿದೆ.

Published On :
ಲಖನೌ: ಉತ್ತರಪ್ರದೇಶದಲ್ಲಿ ಮಹಾಘಟಬಂಧನ ರಚನೆ ಮೂಲಕ ಪ್ರಧಾನಿ ಮೋದಿಗೆ ತೀವ್ರ ಪೈಪೋಟಿ ನೀಡುವ ಯೋಜನೆಯಲ್ಲಿದ್ದ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮಹಾಘಟಬಂಧನಕ್ಕೆ ದೊಡ್ಡ ಶಾಕ್ ಎದುರಾಗಿದ್ದು ಮೂರನೇ ದಿನಕ್ಕೆ ನಿಷಾದ್ ಪಾರ್ಟಿ ಮೈತ್ರಿಕೂಟದಿಂದ ಹೊರಬಿದ್ದಿದೆ.
ಲಖನೌನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ಮಹಾಘಟಬಂಧನದಿಂದ ಹೊರ ಬಂದಿರುವುದಾಗಿ ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷಕ್ಕೂ ಮತ್ತು ನಿಷಾದಾ ಪಾರ್ಟಿಗೂ ಇನ್ನು ಯಾವುದೇ ಮೈತ್ರಿ ಇರುವುದಿಲ್ಲ. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ನಿಷಾದ್ ಪಕ್ಷ ತನ್ನದೇ ಚಿಹ್ನೆಯಡಿ ಸ್ಪರ್ಧಿಸಲು ಬಯಸಿತ್ತು. ಆದರೆ ಸಮಾಜವಾದಿ ಪಕ್ಷ ಅದಕ್ಕೆ ಒಪ್ಪಲಿಲ್ಲ ಎಂದು ನಿಷಾದ್ ಪಕ್ಷದ ಮಾಧ್ಯಮ ಉಸ್ತುವಾರಿ ನಿಕ್ಕಿ ನಿಷಾದ್ ಅಲಿಯಾಸ್ ರಿತೇಶ್ ನಿಷಾದ್ ಗೋರಖ್ ಪುರದಲ್ಲಿ ತಿಳಿಸಿದರು.
ಸಂಜಯ್ ನಿಷಾದ್ ಪುತ್ರ ಪ್ರವೀಣ್ ನಿಶಾದ್ 2018ರ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಗೋರಖ್ ಪುರ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದ್ದು ಅಲ್ಲಿಂದ ಎಸ್ ಪಿ ಅಭ್ಯರ್ಥಿಯಾಗಿ ನಿಷಾದ್ ಪುತ್ರಿ ಗೆದ್ದಿರುವುದು ಮಹತ್ವದ ಘಟನೆಯಾಗಿತ್ತು.
ನಿಷಾದ್ ಪಾರ್ಟಿ ಮಹಾಘಟಬಂಧನದಿಂದ ಹೊರಬರುತ್ತಿದ್ದಂತೆ ಸಮಾಜವಾದಿ ಪಕ್ಷದ ಗೋರಖಪುರ ಮತ್ತು ಕಾನ್ಪುರ್ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಗೋರಖಪುರದಿಂದ ರಾಮ್ಬುಯಾನ್ ನಿಷಾದ್ ಮತ್ತು ಕಾನ್ಪುರದಿಂದ ರಾಮ ಕುಮಾರ್ ರನ್ನು ಕಣಕ್ಕಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರಪ್ರದೇಶಸಮಾಜವಾದಿ ಪಕ್ಷSamajwadi PartyLok Sabha pollsYogi AdityanathMahagathbandhanಯೋಗಿ ಆದಿತ್ಯನಾಥಮಹಾಘಟಬಂಧನNishad Partyನಿಷಾದ್ ಪಾರ್ಟಿಲೋಕಸಭೆ ಚುನಾವಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


