ಗ್ಲಾಮರ್ ಲುಕ್‍ನಲ್ಲಿ ಮತಗಟ್ಟೆ ಅಧಿಕಾರಿ, ಹಳದಿ ಸೀರೆ ಅಧಿಕಾರಿಗೆ ಫಿದಾ, ಆಕೆ ಯಾರೆಂದು ಹುಡುಕಾಡಿದ ನೆಟಿಗರು!
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇತ್ತೀಚೆಗೆ ದಿನಬೆಳಗಾಗುವುದರಲ್ಲೇ ಸ್ಟಾರ್ ಆಗಿಬಿಡುತ್ತಾರೆ. ಇನ್ನು ಮತಗಟ್ಟೆ ಅಧಿಕಾರಿಯೊಬ್ಬರು ಹಳದಿ ಸೀರೆಯಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಫಿದಾ ಆಗಿದ್ದಾರೆ.

Published On :
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇತ್ತೀಚೆಗೆ ದಿನಬೆಳಗಾಗುವುದರಲ್ಲೇ ಸ್ಟಾರ್ ಆಗಿಬಿಡುತ್ತಾರೆ. ಇನ್ನು ಮತಗಟ್ಟೆ ಅಧಿಕಾರಿಯೊಬ್ಬರು ಹಳದಿ ಸೀರೆಯಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಫಿದಾ ಆಗಿದ್ದಾರೆ.
ಭಾರತದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು 5ನೇ ಹಂತದ ಮತದಾನದ ವೇಳೆ ಹಳದಿ ಸೀರೆಯುಟ್ಟ ಮಹಿಳೆಯೊಬ್ಬುರ ಕೈಯಲ್ಲಿ ಮತಪೆಟ್ಟಿಗೆ ಸಾಮಗ್ರಿ ಹಿಡಿದು ಮತಗಟ್ಟೆಯತ್ತ ಹೆಜ್ಜೆ ಹಾಕುತ್ತ ಬಂದಿದ್ದರು. ಈ ಮತಗಟ್ಟೆ ಅಧಿಕಾರಿಗೆ ನೆಟಿಗರು ಫಿದಾ ಆಗಿದ್ದು ಆಕೆ ಯಾರೆಂದು ಸಾಮಾಜಿಕ ಜಾಲತಾಣದಲ್ಲಿ ಶೋಧ ನಡೆಸುತ್ತಿದ್ದಾರೆ.
ರಾಜಸ್ಥಾನ ಜೈಪುರದಲ್ಲಿ ನಡೆದ ಐದನೇ ಹಂತದ ಚುನಾವಣೆ ವೇಳೆ ಕುಮಾವತ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿ ಹೆಸರು ನಳಿನಿ ಸಿಂಗ್. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಳಿನಿ ಜೈಪುರ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಆಕೆಯನ್ನು ನೋಡಿ ಕಣ್ತುಂಬಿಕೊಂಡ ಮತದಾರರು ಇನ್ನು ಮುಂದೆ ಮತಗಟ್ಟೆಗಳಲ್ಲಿ ಸುಂದರ ಮಹಿಳೆಯರನ್ನು ನೇಮಿಸಬೇಕು ಎಂಬ ಬೇಡಿಕೆಗಳು ಇದೀಗ ಹೆಚ್ಚಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rajasthanರಾಜಸ್ತಾನಲೋಕಸಭೆ ಚುನಾವಣೆLok Sabha pollsLady Polling OfficerYellow Sareeಮತಗಟ್ಟೆ ಅಧಿಕಾರಿಹಳದಿ ಸೀರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


