ಸ್ವಾರಸ್ಯ

ಅಕಸ್ಮಾತಾಗಿ ಬಿಜೆಪಿಗೆ ಮತ ಹಾಕಿದ, ಮನನೊಂದು ತನ್ನ ಬೆರಳನ್ನೇ ಕತ್ತರಿಸಿಕೊಂಡ, ವಿಡಿಯೋ ವೈರಲ್!

ಲೋಕಸಭೆ ಚುನಾವಣಾ ರಣಕಣದಲ್ಲಿ ಬಿಜೆಪಿ ಹವಾ ಸ್ವಲ್ಪ ಜೋರಾಗಿಯೇ ಇದೆ. ಅಂತೆ ಬಿಎಸ್​​ಪಿ ಬೆಂಬಲಿಗನೋರ್ವ ತಪ್ಪಾಗಿ ಬಿಎಸ್​​ಪಿ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಕೋಪಗೊಂಡ ಬೆಂಬಲಿಗೆ...

ಅಕಸ್ಮಾತಾಗಿ ಬಿಜೆಪಿಗೆ ಮತ ಹಾಕಿದ, ಮನನೊಂದು ತನ್ನ ಬೆರಳನ್ನೇ ಕತ್ತರಿಸಿಕೊಂಡ, ವಿಡಿಯೋ ವೈರಲ್!
ಸಂಗ್ರಹ ಚಿತ್ರ
Published On :
ನವದೆಹಲಿ: ಲೋಕಸಭೆ ಚುನಾವಣಾ ರಣಕಣದಲ್ಲಿ ಬಿಜೆಪಿ ಹವಾ ಸ್ವಲ್ಪ ಜೋರಾಗಿಯೇ ಇದೆ. ಅಂತೆ ಬಿಎಸ್​​ಪಿ ಬೆಂಬಲಿಗನೋರ್ವ ತಪ್ಪಾಗಿ ಬಿಎಸ್​​ಪಿ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಕೋಪಗೊಂಡ ಬೆಂಬಲಿಗೆ ಮತ ಹಾಕಿದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಉತ್ತರಪ್ರದೇಶದ ಬುಲಂದ್ ಶಹರ್ ಮೂಲದ ದಲಿತ ಯುವಕ ಪವನ್ ಕುಮಾರ್ ಇಲ್ಲಿನ ಶಿಕಾರ್ ಪುರ್ ಮತಗಟ್ಟೆಯಲ್ಲಿ ಬಿಎಸ್​​ಪಿಗೆ ಮತ ಚಲಾಯಿಸಲು ಹೋಗಿದ್ದ. ಆದರೆ ಅಲ್ಲಿ ಕಣ್ತಪ್ಪಿಪ ಬಿಜೆಪಿಗೆ ಮತ ಹಾಕಿದ್ದಾನೆ. 
ತನ್ನ ತಪ್ಪಿನ ಅರಿವಾಗಿ ಮನೆಗೆ ಬಂದ ಕೂಡಲೇ ಚಾಕು ತೆಗೆದುಕೊಂಡು ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಬಳಿಕ ಬೆರಳನ್ನು ಕತ್ತರಿಸಿಕೊಂಡಿದ್ದ ವಿಡಿಯೋವನ್ನು ಪವನ್ ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಯಾಕಾಗಿ ತನ್ನ ಬೆರಳನ್ನು ಕತ್ತರಿಸಿಕೊಂಡೆ ಎಂಬುದನ್ನು ಅಲ್ಲಿಯೇ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾನೆ. ತನ್ನ ತಪ್ಪಿನ ಪ್ರಯಾಶ್ಚಿತ್ತಕ್ಕಾಗಿ ಕೈ ಬೆರಳನ್ನು ಕತ್ತರಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.