ಜಿಲ್ಲಾ ಸುದ್ದಿ

ಖಾಲಿ ಮನೆ ಕಳ್ಳತನಕ್ಕೆ ಖಾಕಿಯೇ ದಾರಿ

ಕಳ್ಳರನ್ನು ಹಿಡಿದು ಶಿಕ್ಷಿಸಬೇಕಾದುದು ಪೊಲೀಸರ ಕರ್ತವ್ಯ. ಆದರೆ, ಪೊಲೀಸಪ್ಪನೇ ಖಾಲಿ ಇರುವ ಮನೆಗಳ ಕಳ್ಳತನಕ್ಕೆ ಪ್ರೇರಣೆ ನೀಡಿ ಕಳ್ಳತನ ಮಾಲಿನಲ್ಲಿ ಪಾಲು ಪಡೆದು ಸಿಕ್ಕಿ ಬಿದ್ದಿದ್ದಾನೆ. ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ...

ಖಾಲಿ ಮನೆ ಕಳ್ಳತನಕ್ಕೆ ಖಾಕಿಯೇ ದಾರಿ
(ಸಂಗ್ರಹ ಚಿತ್ರ)
Published On :

ಬೆಂಗಳೂರು: ಕಳ್ಳರನ್ನು ಹಿಡಿದು ಶಿಕ್ಷಿಸಬೇಕಾದುದು  ಪೊಲೀಸರ ಕರ್ತವ್ಯ. ಆದರೆ, ಪೊಲೀಸಪ್ಪನೇ ಖಾಲಿ ಇರುವ ಮನೆಗಳ ಕಳ್ಳತನಕ್ಕೆ ಪ್ರೇರಣೆ ನೀಡಿ ಕಳ್ಳತನ ಮಾಲಿನಲ್ಲಿ ಪಾಲು ಪಡೆದು ಸಿಕ್ಕಿ ಬಿದ್ದಿದ್ದಾನೆ. ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ.

ಸರಗಳ್ಳತನ ಮಾಡುವಂತೆ ಕಳ್ಳನೊಬ್ಬನಿಗೆ ಮಾರ್ಗದರ್ಶನ ನೀಡಿದ ಪೊಲೀಸ್ ಪೇದೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೋಮವಾರ ಗೃಹ ಇಲಾಖೆಗೆ ಸೂಚನೆ ನೀಡಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶೇಷಾ ಅಲಿಯಾಸ್ ಶೇಷಾದ್ರಿ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾ.ಎ.ವಿ.ಚಂದ್ರಶೇಖರ್ ಅವರಿದ್ದ ನ್ಯಾಯಪೀಠ ತಪ್ಪಿತಸ್ತರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ವೇಳೆ ಹಾಜರಾಗಿದ್ದ ನೆಲಮಂಗಲ ವಿಭಾಗದ ವೃತ್ತ ನಿರೀಕ್ಷಕ ಕೆ.ನಾಗರಾಜು, ಕಳ್ಳತನಕ್ಕೆ ಮಾರ್ಗದರ್ಶನ ನೀಡಿದ ಪೊಲೀಸ್ ಪೇದೆಯನ್ನು ಅಮಾನತು ಮಾಡಿದ್ದು, ಇಲಾಖಾವಾರು ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಅಮಾನತ್ ನ್ನು ಹಿಂಪಡೆದು ಸೂಲಿಬೆಲೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಜ್ಞಾಪನ ಪತ್ರ ಸಲ್ಲಿಸಿದ್ದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪೊಲೀಸ್ ಪೇದೆಯೊಬ್ಬ ಕಳ್ಳನೊಂದಿಗೆ ಕೈ ಜೋಡಿಸಿ ಡಕಾಯಿತಿ ಮಾಡುವುದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಇಂತಹ ಆರೋಪಗಳಿರುವ ಪೊಲೀಸರಿಗೆ ಕೇವಲ ಅಮಾನತ್ತು ಮತ್ತು ವರ್ಗಾವಣೆ ಶಿಕ್ಷೆಯಲ್ಲ, ಆರೋಪಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿತು. ಪೊಲೀಸ್ ಇಲಾಖೆಯಲ್ಲಿ ಕೆಲ ಕಿರಾತಕರಿದ್ದು, ಒಬ್ಬರು ಮಾಡುವ ಕೆಲಸದಿಂದಾಗಿ ಇಡೀ ಇಲಾಖೆ ತಲೆ ತಗ್ಗಿಸುವಂತಾಗುತ್ತದೆ. ಆದ್ದರಿಂದ ಇಂಥ ತಪ್ಪು ಮಾಡುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?:
ನೆಲಮಂಗಲ ವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ ಸೇರಿದಂತೆ ಹಲವು ಸರಗಳ್ಳತನ ಆರೋಪಗಳಲ್ಲಿ ಶೇಷಾದ್ರಿ ಎಂಬುವರನ್ನು ಬಂಧನಕ್ಕೊಳಪಡಿಸಲಾಗಿತ್ತು. ವಿಚಾರಣೆ ನಡೆಸುವ ವೇಳೆ ಇದೇ ಠಾಣೆಯ ಪೊಲೀಸ್ ಪೇದೆ ಕೃಷ್ಣಮೂರ್ತಿ ಈ ಆರೋಪಿಯಿಂದ ಮಾಹಿತಿ ಪಡೆದುಕೊಂಡಿದ್ದರು. ಕಳ್ಳತನದ ಮೊಬೈಲ್ ಫೋನ್‍ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದರು. ಆಲ್ಲದೆ, ಕಷ್ಣಮೂರ್ತಿ ಸಹೋದರ ಗೌತಮ್ ರ ನಂಬರ್‍ನ್ನು ನೀಡಿದ್ದು, ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಆರೋಪಿ ಗೌತಮïರನ್ನು ಫೋನ್ ಮೂಲಕ ಸಂಪರ್ಕಿಸಿದ ಸಂದರ್ಭದಲ್ಲಿ ಆತ ಒಂಟಿ ಮಹಿಳೆಯಿರುವ ಮನೆಯನ್ನು ಗುರುತಿಸಿ ದರೋಡೆ ಮಾಡುವಂತೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ದರೋಡೆ ಮಾಡಿದ ಮೇಲೆ ಚಿನ್ನದ ಚೈನ್‍ನ್ನು ಪಡೆದು ರು.5 ಸಾವಿರ ನೀಡಿದ್ದರು ಎಂದು ತಿಳಿಸಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.