ಜಿಲ್ಲಾ ಸುದ್ದಿ

ನಕಲಿ ವೀಸಾ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 9 ಮಂದಿ ಬಂಧನ

ನಕಲಿ ವೀಸಾ ಮತ್ತು ದಾಖಲೆಗಳನ್ನು ಹೊಂದಿದ್ದ 9 ಮಂದಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ...

ನಕಲಿ ವೀಸಾ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 9 ಮಂದಿ ಬಂಧನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Published On :

ಬೆಂಗಳೂರು: ನಕಲಿ ವೀಸಾ ಮತ್ತು ದಾಖಲೆಗಳನ್ನು ಹೊಂದಿದ್ದ 9 ಮಂದಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ 9 ಮಂದಿಯನ್ನು ಉದ್ಯೋಗ ಅರಸಿ ಬಹರೇನ್‌ಗೆ ಹೊರಟಿದ್ದವರ ಪಾಸ್ ಪೋರ್ಟ್ ನಿಲ್ದಾಣದಲ್ಲಿ ಅಧಿಕಾರಿಗಳು ಪರಿಶೀಲಿಸಿದ್ದು ಈ ವೇಳೆ ಎಲ್ಲರ ವೀಸಾ ಮತ್ತು ಇತರ ದಾಖಲೆಗಳು ನಕಲಿ ಎಂಬುದು ತಿಳಿದಿದ್ದು ಅವರನ್ನು ಬಂಧಿಸಲಾಗಿದೆ.

ಬಂಧಿತರು ಇಷಾಕ್ ಮೊಹಮ್ಮದ್ ಆಶಿಕ್ (21), ಸಾಧಿಕ್ ಪಾಷಾ (25), ಎಜಾಜ್ ದಸ್ತಗೀರ್ (24), ಇರ್ಫಾನ್ (24) ಮೊಹಮದ್ ಶೋಯಬ್ (22), ಸಲೀಂ ಪಾಷಾ (21), ಇಷಾಬುದ್ದೀನ್ (38), ಸನಾವುಲ್ಲ (22) ಹಾಗೂ ಅಜಂನನ್ನು (28) ಎಂದು ತಿಳಿದುಬಂದಿದೆ.

ಅನುಮಾನಗೊಂಡ ಸಿಬ್ಬಂದಿ ಕೂಡಲೇ ಠಾಣೆಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ತೆರಳಿ ಎಲ್ಲರನ್ನು ಬಂಧಿಸಲಾಯಿತು. ಪಿಯುಸಿ ಮತ್ತು ಡಿಪ್ಲೊಮಾ ಮುಗಿಸಿರುವ ಇವರಿಗೆ, ಭದ್ರಾವತಿಯ ಟ್ರಾವೆಲ್‌ ಏಜೆಂಟ್ ಬಷೀರ್ ಎಂಬಾತ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ಅದಕ್ಕಾಗಿ ಎಲ್ಲರಿಂದ ತಲಾ ರು. 1.2 ಲಕ್ಷ ಪಡೆದು, ನಕಲಿ ವೀಸಾ, ದಾಖಲೆಗಳನ್ನು ಸೃಷ್ಟಿಸಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.