ಗಣೇಶ ವಿಸರ್ಜನೆಗೆ ತೆರಳಿದ ಇಬ್ಬರು ಬಾಲಕರು ನೀರುಪಾಲು
ನಗರದ ಹೊರವಲಯದ ಮಾರಗೊಂಡನಹಳ್ಳಿ ಕೆರೆಯಲ್ಲಿ ಗಣೇಶ ವಿಸರ್ಜನೆಗೆ ತೆರಳಿದ್ದ ಬಾಲಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವ...

ಬೆಂಗಳೂರು: ನಗರದ ಹೊರವಲಯದ ಮಾರಗೊಂಡನಹಳ್ಳಿ ಕೆರೆಯಲ್ಲಿ ಗಣೇಶ ವಿಸರ್ಜನೆಗೆ ತೆರಳಿದ್ದ ಬಾಲಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಶನಿವಾರ ಸಂಭವಿಸಿದೆ.
ಭದ್ರಾವತಿ ಮೂಲದ ಚಂದನ್(14) ಹಾಗೂ ತಮಿಳುನಾಡಿನ ತಿರುವಣಮಲೈ ಮೂಲದ ದಿನೇಶ್(16) ಮೃತ ಬಾಲಕರು. ಮಾರಗೊಂಡನಹಳ್ಳಿಯಲ್ಲಿರುವ ಅಚಾರ್ಯ ರಕುಮ್ ರೆಸಿಡೆನ್ಷಿಯಲ್ ಶಾಲೆಯಲ್ಲಿ ಚಂದನ್ 9ನೇ ತರಗತಿ ಹಾಗೂ ದಿನೇಶ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹ ವಿಸರ್ಜನೆಗೆ ಮಾರಗೊಂಡನಹಳ್ಳಿ ಕೆರೆಗೆ ಇಬ್ಬರು ಬಾಲಕರು ತೆರಳಿದ್ದರು. ಕೆರೆ ತಲುಪುತ್ತಿದ್ದಂತೆ ಅಲ್ಲಿಯ ಯುವಕರು ಗಣೇಶ ವಿಗ್ರಹ ತೆಗೆದುಕೊಂಡು ಕೆರೆಯ ಒಳಗೆ ವಿಸರ್ಜನೆ ಮಾಡಲು ನೀರಿಗೆ ಇಳಿದಿದ್ದಾರೆ. ಅವರ ಹಿಂದೆಯೇ ಬಾಲಕರು ಕೂಡಾ ಹೋಗಿದ್ದರು.
ನೀರಿನ ಆಳ ಹೆಚ್ಚಾಗಿದ್ದ ಕಾರಣ ಈಜಲು ಆಗದೆ ಬಾಲಕರು ಮುಳುಗಲು ಆರಂಭಿಸಿದರು. ಇದನ್ನು ನೋಡಿದ ಯುವಕರು ಗಣೇಶ ವಿಗ್ರಹ ಬಿಟ್ಟು ಬಾಲಕರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ ಪೊಲೀಸರು ಹಾಗೂ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಇಬ್ಬರ ಶವಗಳನ್ನು ಮೇಲಕ್ಕೆತ್ತಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


