ಬಿಎಂಟಿಸಿ ಸಂಘಕ್ಕೆ ಮಳಿಗೆ ಭಾಗ್ಯ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಸಂಘ ಆರಂಭಿಸಲು ಉದ್ದೇಶಿಸಿರುವ ನ್ಯಾಯಬೆಲೆ ಅಂಗಡಿ ರೀತಿಯ ದವಸ ಧಾನ್ಯ ಬಟ್ಟೆ ವಿತರಣಾ ಮಳಿಗೆ ಆರಂಭಕ್ಕೆ ಅಗತ್ಯ ಜಾಗ ಕಲ್ಪಿಸಲು ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು...

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಸಂಘ ಆರಂಭಿಸಲು ಉದ್ದೇಶಿಸಿರುವ ನ್ಯಾಯಬೆಲೆ ಅಂಗಡಿ ರೀತಿಯ ದವಸ ಧಾನ್ಯ ಬಟ್ಟೆ ವಿತರಣಾ ಮಳಿಗೆ ಆರಂಭಕ್ಕೆ ಅಗತ್ಯ ಜಾಗ ಕಲ್ಪಿಸಲು ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಭಾನುವಾರ ಬಿಎಂಟಿಸಿ ನೌಕರರ ಬಳಕೆದಾರರ ಸಹಕಾರ ಸಂಘ ಹಮ್ಮಿಕೊಂಡಿದ್ದ ಕಾರ್ಮಿಕರ ಸದಸ್ಯರ ಮಕ್ಕಳಿಗಾಗಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈ ಭರವಸೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ರಫಾಯಲ್ ರಾಜಾ ಅವರು ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿ ನಗರ ಬಸ್ ನಿಲ್ದಾಣದಲ್ಲಿ ಕಾರ್ಮಿಕರ ಅನುಕೂಲಕ್ಕಾಗಿ ಸಂಘದಿಂದ ನ್ಯಾಯಬೆಲೆ ಅಂಗಡಿ ಮಾದರಿಯ ದವಸ ಧಾನ್ಯ, ಬಟ್ಟೆ ಮಳಿಗೆಯನ್ನು ತೆರೆಯಲು ಅವಕಾಶ ಕಲ್ಪಿಸುವಂತೆ ಕೋರಿಕೆ ಸಲ್ಲಿಸಿದ್ದರು.
2016ರ ಕಾರ್ಮಿಕ ವೇತನ ಪರಿಷ್ಕರಣೆಯಲ್ಲಿ ನೌಕರರ ಹಿತರಕ್ಷಣೆಗೆ ಒತ್ತು ನೀಡುವಂತೆ ಮತ್ತು ಕಾರ್ಮಿಕರಿಗಾಗಿ ಕತ್ರಿಗುಪ್ಪೆಯಲ್ಲಿ ನಿರ್ಮಿಸಿದ ಸಮು ದಾಯ ಭವನದ ಬಾಡಿಗೆ ಅತಿ ದುಬಾರಿ ಯಾಗಿದ್ದು, ಅದನ್ನೂ ಸಂಘಕ್ಕೆ ವಹಿಸುವಂತೆ ಸಚಿವರನ್ನು ಕೋರಲಾಯಿತು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ, ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿಯೇ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸೇವೆಗಾಗಿನ ಮೂರು ಪ್ರಶಸ್ತಿನ ನಮ್ಮ ರಾಜ್ಯಕ್ಕೆ ಬಂದಿದೆ. ಕರ್ನಾಟಕದ ಸಾರಿಗೆ ವ್ಯವಸ್ಥೆ ಸುವ್ಯವಸ್ಥಿತ ಎಂಬುದುಸಾಬೀತಾಗಿದೆ ಎಂದರು. ಕಾರ್ಯಕ್ರಮದಲ್ಲಿ 178 ಮಕ್ಕಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಭೀರಾಜ ಜೈನ್, ಉಪಾಧ್ಯಕ್ಷ ವಿ. ಎಸ್.ಆರಾಧ್ಯ, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಮುಖ್ಯ ಸಂಚಾರ ವ್ಯವಸ್ಥಾಪಕ ಬಿ.ಸಿ. ರೇಣುಕೇಶ್ವರ, ಸಂಘದ ಗೌರವಾಧ್ಯಕ್ಷ ಎಂ.ವಿ. ರಮೇಶ್, ಉಪಾಧ್ಯಕ್ಷ ಅರ್ಜುನಪ್ಪ, ಲೆಕ್ಕ ಪರಿಶೋಧಕ ಮಾಧವರಾವ್, ಖರೀದಿ ಸಮಿತಿ ಅಧ್ಯಕ್ಷ ಶಿವಣ್ಣ ಎಸ್.ಜೆ. ಮೇಟಿ, ಎಸ್.ನಾಗರಾಜು, ಎಸ್. ರಾಜು, ಗಂಗಾಧರ್, ವಿ.ಎಲ್. ಮುನಿರೆಡ್ಡಿ, ಚುಂಚಯ್ಯ, ರೇಣುಕಾ ಮೈದುರ, ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


