200ಕ್ಕೂ ಅಧಿಕ ದೇಗುಲಗಳಲ್ಲಿ ಕೈಚಳಕ, ಕೊನೆಗೂ ಸಿಕ್ಕಿಬಿದ್ದ ಕುಖ್ಯಾತ ಕಳ್ಳ
ತ್ತೀಚೆಗೆ ಕಾಮಾಕ್ಷಿಪಾಳ್ಯದ ಶ್ರೀ ಅಂಬಾಮಹೇಶ್ವರಿ ದೇವಸ್ಥಾನದಲ್ಲಿ ಚಿನ್ನದ ಸರಕದ್ದು ಪರಾರಿಯಾಗಿದ್ದ ಕುಖ್ಯಾತ ದೇವಸ್ಥಾನ ಕಳ್ಳನನ್ನು ಬಂಧಿಸಿರುವ ....

ಬೆಂಗಳೂರು: ಇತ್ತೀಚೆಗೆ ಕಾಮಾಕ್ಷಿಪಾಳ್ಯದ ಶ್ರೀ ಅಂಬಾಮಹೇಶ್ವರಿ ದೇವಸ್ಥಾನದಲ್ಲಿ ಚಿನ್ನದ ಸರಕದ್ದು ಪರಾರಿಯಾಗಿದ್ದ ಕುಖ್ಯಾತ ದೇವಸ್ಥಾನ ಕಳ್ಳನನ್ನು ಬಂಧಿಸಿರುವ ಕೆಜಿ ಹಳ್ಳಿ ಪೊಲೀಸರು 220 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕಾಡುಗೊಂಡನಹಳ್ಳಿ ನಿವಾಸಿ ನಾಗರಾಜ್ ಅಲಿಯಾಸ್ ಖೋಜಾ ನಾಗರಾಜ್ (65) ಬಂಧಿತ. ಈತನಿಂದ 221 ಗ್ರಾಂ ತೂಕದ ಚಿನ್ನದ ತಾಳಿ ಮತ್ತು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ದೇವಾಲಯ, ಮೈಸೂರಿನ ಚಾಮುಂಡಿ ಬೆಟ್ಟ, ಬೆಂಗಳೂರಿನ ಅಮ್ಮಣ್ಣ ದೇವಸ್ಥಾನ ಸೇರಿ ರಾಜ್ಯ ಹಾಗೂ ಹೊರ ರಾಜ್ಯಗಳ 150ಕ್ಕೂ ಅಧಿಕ ದೇವಾಲಯ ಗಳಲ್ಲಿ ಕಳ್ಳತನ ಮಾಡಿರುವ ಆರೋಪ ಈತನ ಮೇಲಿದೆ. ಆ.19ರ ಬೆಳಗ್ಗೆ 6.30ಕ್ಕೆ ಅಂಬಾ ಮಹೇಶ್ವರಿ ದೇವಸ್ಥಾನದ ಅರ್ಚಕ ಅನಂತು, ದೇಗುಲದ ಬಾಗಿಲು ತೆಗೆಯುತ್ತಿದಂತೆ ಹಿಂಬಾಲಿಸಿಕೊಂಡು ಹೋದ ಆರೋಪಿ ನಾಗರಾಜ್, ತನ್ನ ಹೊಸ ಬೈಕ್‍ಗೆ ಪೂಜೆ ಮಾಡಿಸಬೇಕೆಂದು ಹೇಳಿದ್ದ. ಬೆಳಗ್ಗೆ 8.45ಕ್ಕೆ ಅರ್ಚಕರು ಬೈಕ್ ಪೂಜೆ ಮಾಡಲು ಹೊರ ಬಂದಾಗ ನಾಗರಾಜ್, ಗರ್ಭಗುಡಿಗೆ ನುಗ್ಗಿ ಸರ ಕಿತ್ತುಕೊಂಡಿದ್ದ. ಪೂಜೆ ಮುಗಿದ ಬಳಿಕ ಕಾಣಿಕೆ ಕೊಟ್ಟು ಬೈಕ್‍ನಲ್ಲಿ ಪರಾರಿಯಾಗಿದ್ದ. 10 ಗಂಟೆಗೆ ದೇವಿ ಪೂಜೆ ಮಾಡಲು ಸಿದ್ಧ ನಡೆಸುತ್ತಿದ್ದಾಗ ಚಿನ್ನದ ತಾಳಿ, ಗುಂಡು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಸರಗಳ್ಳತನದ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿ ಕೆಜಿ ಹಳ್ಳಿ ನಿವಾಸಿಯಾಗಿದ್ದು ಈ ಹಿಂದೆಯು ದೇವಸ್ಥಾನ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನದ ಮೇಲೆ ಠಾಣೆಗೆ ಕರೆತಂದು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


